ಕರ್ನಾಟಕದಲ್ಲಿ 3 ಸಾವಿರ ದಾಟಿದ ಏಕದಿನದ ಕೊರೊನಾ ಸೋಂಕು..!ಇದು ಐದು ತಿಂಗಳಲ್ಲೇ ಗರಿಷ್ಠ ದೈನಂದಿನ ಪ್ರಕರಣ..!!

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ (ಭಾನುವಾರ) 3,082 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ತಿಳಿಸಿದೆ. ಇದು ಐದು ತಿಂಗಳ ನಂತರ ದಾಖಲಾದ ದೈನಂದಿನ ಗರಿಷ್ಠ ಪ್ರಕರಣಗಳಾಗಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,037ಕ್ಕೆ ತಲುಪಿದೆ. 12 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,87,012 ಕ್ಕೆ ಏರಿದೆ. ಹಾಗೂ ಸಾವಿನ ಸಂಖ್ಯೆಯನ್ನು 12,504 ಕ್ಕೆ ತಲುಪಿದೆ, ಕಳೆದ ಮೂರು ದಿನಗಳಿಂದ ರಾಜ್ಯವು ಪ್ರತಿದಿನ 2,500 ಕ್ಕೂ ಹೆಚ್ಚು ಹೊಸ ಸೋಂಕುಗಳನ್ನು ದಾಖಲಿಸುತ್ತಿತ್ತು. ಶನಿವಾರ, 2,886 ಪ್ರಕರಣಗಳು ದಾಖಲಾಗಿದ್ದವು. ಶುಕ್ರವಾರ 2,566 ಪ್ರಕರಣಗಳು ದಾಖಲಾಗಿದ್ದರೆ, ಗುರುವಾರ ಒಟ್ಟು 2,523 ಜನರು ಸೋಂಕಿಗೆ ಒಳಗಾಗಿದ್ದರು.
ಭಾನುವಾರ 1285 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 9,51,452ಕ್ಕೆ ತಲುಪಿದೆ. ಪ್ರಸ್ತುತ, ಸಕಾರಾತ್ಮಕ ದರವು 2.89% ರಷ್ಟಿದೆ.
ಬೆಂಗಳೂರಿನಲ್ಲಿ ಒಂದೇ ದಿನ 2004 ಸೋಂಕು ಪ್ರಕರಣಗಳು ವರದಿಯಾಗಿದ್ದು, 786 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 7 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 15882 ಸಕ್ರಿಯ ಪ್ರಕರಣಗಳಿವೆ.
ಇಹಬ್ಬಗಳಾದ ಹೋಳಿ, ಯುಗಾದಿ, ಶಾಬ್-ಎ-ಬರಾತ್ ಮತ್ತು ಗುಡ್ ಫ್ರೈಡೇ ಸೇರಿದಂತೆ ಹಬ್ಬ ಹರಿದಿನಗಳು ಹಾಗೂ ಜಾತ್ರೆ ಇತ್ಯಾದಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ.
ಅಲ್ಲದೆ, ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಏಪ್ರಿಲ್ 1ರಿಂದ ಕೊರೊನಾ ಋಣಾತ್ಮಕ ಪರೀಕ್ಷಾ ವರದಿ ನೀಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement