ಕೆನಡಾ ವ್ಯಾಂಕೋವರ್ ಗ್ರಂಥಾಲಯದಲ್ಲಿ ವ್ಯಕ್ತಿಯಿಂದ ಹಲವರಿಗೆ ಇರಿತ: ಮಹಿಳೆ ಸಾವು, ಆರು ಮಂದಿಗೆ ಗಾಯ

ಅಮೆರಿಕದ ಅಮೆರಿಕದ ಕೊಲೊರಾಡೋದ ಬೌಲ್ಡರ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಬೇಕಾಬಿಟ್ಟಿ ಗುಂಡುಹಾರಿಸಿ ೧೦ ಜನರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕೆನಡಾದ ವ್ಯಾಂಕೋವರ್‌ನಲ್ಲಿ ಶನಿವಾರ ಇಂಥದ್ದೇ ಘಟನೆ ನಡೆದಿದೆ.

ವ್ಯಕ್ತಿಯೊಬ್ಬ ದಾಳಿ ಮಾಡಿ ಚೂರಿಯಿಂದ ಇರಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗ್ರಂಥಾಲಯದೊಳಗೆ ವ್ಯಕ್ತಿಯೊಬ್ಬ ಜನರನ್ನು ಇರಿದ ಪರಿಣಾಮ ಒಬ್ಬ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಕೆನಡಾದ ಪೊಲೀಸ್ ಅಧಿಕಾರಿಗಳು ಕೊಲೆಗಾರನನ್ನು ಬಂಧಿಸಿದ್ದಾರೆ.
ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್ಸಿಎಂಪಿ) ಕೊಲೆಗಾರನು ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದೆ. ಆದಾಗ್ಯ ಇನ್ನೂ “ಸಂಭಾವ್ಯ ಹೆಚ್ಚುವರಿ ವ್ಯಕ್ತಿಗಳಿಗಾಗಿ ಹುಡುಕಲಾಗುತ್ತಿದೆ ಎಂದು ತಿಳಿಸಿದೆ. ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ತಂಡದ ಸಾರ್ಜೆಂಟ್ ಫ್ರಾಂಕ್ ಜಾಂಗ್, ತನ್ನ 20 ರ ಹರೆಯದಲ್ಲಿರುವ ಈ ದಾಳಿಕೋರನು ಈ ಹಿಂದೆ ಪೊಲೀಸರೊಂದಿಗೆ ಸಂವಹನ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಆರು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತುರ್ತು ಆರೋಗ್ಯ ಸೇವೆಗಳ ಆಮಿ ರಾಬರ್ಟ್‌ಸನ್ ಹೇಳಿದ್ದಾರೆ.
ವಿಡಿಯೋದಲ್ಲಿ, ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಆತನ ತನ್ನ ಕಾಲಿಗೆ ಇರಿದುಕೊಳ್ಳುವುದನ್ನು ಕಾಣಬಹುದು.
ನೆರೆಯ ಅಮೆರಿಕದಲ್ಲಿ ಇದೇ ರೀತಿಯ ಘಟನೆ ವರದಿಯಾದ ಒಂದು ವಾರದ ನಂತರ ಕೆನಡಾ ಈ ಘಟನೆ ಸಂಭವಿಸಿದೆ, ಅಮೆರಿಕದ ಕೊಲೊರಾಡೋದ ಬೌಲ್ಡರ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಸಿರಿಯಾದಿಂದ ಮುಸ್ಲಿಂ ವಲಸಿಗ ಗುಂಡು ಹಾರಿಸಿ ಕನಿಷ್ಠ 10 ಜನರು ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement