ಡಿಕೆಶಿ, ಬೆಂಬಲಿಗರ ಕಾರಿನ ಮೇಲೆ ರಮೇಶ ಜಾರಕಿಹೊಳಿ ಬೆಂಬಲಿಗರ ಕಲ್ಲು ತೂರಾಟ, ಗನ್‌ಮ್ಯಾನ್‌ ಎಳೆದಾಡಿದರು

posted in: ರಾಜ್ಯ | 0

ಬೆಳಗಾವಿ: ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಿಂದ ತೆರಳುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಅವರ ಬೆಂಬಲಿಗರ ವಾಹನಗಳ ಮೇಲೆ ಹಾಗೂ ಎಸ್ಕಾರ್ಟ್‌ ವಾಹನದ ಮೇಲೆ  ರಮೇಶ್ ಜಾರಕಿಹೊಳಿ ಬೆಂಬಲಿಗರು ಕಲ್ಲು ತೂರಾಟ ಮಾಡಿದ್ದಾರೆ. ಡಿ.ಕೆ. ಶಿವಕುಮಾರ ಬೆಂಗಲಿಗರ ಕಾರಿನ ಗಾಜುಗಳು ಪುಡಿಯಾಗಿದೆ. ಅಲ್ಲದೆ ಡಿ.ಕೆ.ಶಿವಕುಮಾರ ಅವರ ಗನ್‌ಮ್ಯಾನ್‌ ಅವರನ್ನು  ಎಳೆದಾಡಿದ್ದಾರೆ. ನಂತರ ಗನ್‌ಮ್ಯಾನ್‌ ಬೇರೆ ಗಾಡಿಯ ಮೇಲೆ ತಪ್ಪಿಸಿಕೊಂಡು ಹೋಗಿದ್ದಾರೆ.
ಡಿ.ಕೆ.ಶಿವಕುಮಾರ ಆಗಮನದ ಸುದ್ದಿ ತಿಳಿದು ಮೊದಲೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ನಿಯಂತ್ರಿಸಲು ೨೦೦ಕ್ಕೂ ಹೆಚ್ಚು ಪೋಲೀಸರನ್ನು ನಿಯೋಜನೆ ಮಾಡಿದ್ದು, ಅವರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಈ ವೇಳೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ವಿಮಾನನಿಲ್ದಾಣದಿಂದ ಡಿ.ಕೆ. ಶಿವಕುಮಾರ್ ಆಗಮಿಸಿ ಅವರು ಹಾಗೂ ಅವರ ಬೆಂಬಲಿಗರು ವಾಹನದಲ್ಲಿ ತೆರಳುವಾಗ ವಾಹನದ ಮೇಲೆ ಚಪ್ಪಲಿ, ಕಲ್ಲು ತೂರಾಟ ನಡೆಸಲಾಗಿದೆ. ಅವರ ವಾಹನಗಳನ್ನು ತಡೆಯಲು ರಮೇಶ್ ಬೆಂಬಲಿಗರು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ಅಲ್ಲದೆ ಹಲವಾರು ರಮೇಶ ಜಾರಕಿಹೊಳಿ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ