ಪಶ್ಚಿಮ ಬಂಗಾಳ: ಬಿಜೆಪಿ ಸಂಸದೆ ಮೇಲೆ ರಾಸಾಯನಿಕ ಬಣ್ಣ ಎರಚಿದ ಟಿಎಂಸಿ ಕಾರ್ಯಕರ್ತರು

ಹೂಗ್ಲಿ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚುಚುರಾದಲ್ಲಿ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಮೇಲೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಇಲ್ಲಿನ ರವೀಂದ್ರ ಕಲಿತಾಲಾ ಮೈದಾನದಲ್ಲಿ ನಡೆಯುವ ಬಸಂತ್‌ ಉತ್ಸವದಲ್ಲಿ ಪಾಲ್ಗೊಳ್ಳಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ರಾಸಾಯನಿಕ ಲೆಪಿತ ಬಣ್ಣವನ್ನು ಲಾಕೆಟ್‌ ಕಣ್ಣಿಗೆ ಎರಚಿದ್ದಾರೆ. ಬಣ್ಣ ಎರಚುವುದು ಬೇಡವೆಂದರೂ ಬಣ್ಣ ಎರಚಲಾಗಿದೆ. ಕೊಡಲಿಯಾ ಗ್ರಾಮದ ಪ್ರಧಾನ್‌ ಆಯೋಜಿತ ಕೃತ್ಯ ಇದಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಬಣ್ಣ ಅವರ ಕಣ್ಣು ಪ್ರವೇಶಿಸಿದ್ದರಿಂದ ಉರಿಯಲಾರಂಭಿಸಿತು. ಬಣ್ಣ ಎರಚಿದವರು ಟಿಎಂಸಿ ಬ್ಯಾಡ್ಜ್‌ ಧರಿಸಿದ್ದರು ಎಂದು ಚಟರ್ಜಿ ಆರೋಪಿಸಿದ್ದಾರೆ.
ಬಿಜೆಪಿ ಪೊಲೀಸರಿಗೆ ದೂರು ನೀಡಿದೆ. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಬಿಜೆಪಿ ಕೃತ್ಯವನ್ನು ಖಂಡಿಸಿದ್ದು, ಟ್ವೀಟ್‌ನಲ್ಲಿ, “ದ್ವೇಷ, ಹಿಂಸೆ ಮತ್ತು ಕಿರುಕುಳದ‘ ಖೇಲಾ ’(ಆಟ) ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಮಹಿಳೆಯರಿಗೆ ಕಿರುಕುಳ ನೀಡುವ ಈ ಹೇಡಿತನದ ‘ಖೇಲಾ’ ಸೋಲಿನ ಭಯದಿಂದ ಪ್ರಚೋದಿಸಲ್ಪಡುತ್ತದೆ! ” ಎಂದು ತಿಳಿಸಿದೆ.
ಏಪ್ರಿಲ್ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ 3 ನೇ ಹಂತದ ಸಂದರ್ಭದಲ್ಲಿ ಚುಚುರಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಪ್ರಮುಖ ಸುದ್ದಿ :-   'ಡೂಮ್ಸ್‌ಡೇ ವಿಮಾನʼದಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಭಾರತ ಪ್ರವಾಸ : ಇದು 'ಆಕಾಶದ ಅರಮನೆ' ; ಚಿನ್ನ ಲೇಪಿತ ವಸ್ತುಗಳು-ಹೈ ಸೆಕ್ಯುರಿಟಿ.....

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement