2ನೇ ಅಲೆಯಲ್ಲಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕೊರೊನಾ…!!

ಚಿತ್ರ ಕೃಪೆ-ಇಂಟರ್ನೆಟ್‌

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಆರಂಭವಾಗಿದೆ ಎಂದು ಆರೋಗ್ಯ ಸಚಿವರಾದ ಡಾ.ಸುಧಾಕರ ಅವರೇ ಹೇಳಿದ್ದು, ಸರ್ಕಾರ ಸೋಂಕು ಹರಡುವಿಕೆ ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿ ಶನಿವಾರ 2,886 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,252. ಬೆಂಗಳೂರು ನಗರದಲ್ಲಿ 1820 ಹೊಸ ಪ್ರಕರಣ ದಾಖಲಾಗಿದೆ.
ಆದರೆ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದೆ.ಮೊದಲನೇ ಅಲೆಯಲ್ಲಿ ಮಕ್ಕಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಂಡುಬಂದಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದರಲ್ಲಿಯೂ 10 ವರ್ಷದ ಒಳಗಿನ ಮಕ್ಕಳಲ್ಲಿಯೂ ಸೋಂಕು ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ.
ಮಾರ್ಚ್ 14 ರಿಂದ 21ರ ತನಕ ಬೆಂಗಳೂರು ನಗರದಲ್ಲಿ 160 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯ ಕೋವಿಡ್ ವಾರ್ ರೂಂ ಮಾಹಿತಿ ಪ್ರಕಾರ ಎರಡು ವಾರದಲ್ಲಿ 267 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ವರ್ಷದ ಜೂನ್‌ನಲ್ಲಿ ಈಗ ಪತ್ತೆಯಾದ ಸಂಖ್ಯೆಯಷ್ಟು ಪ್ರಕರಣ ದಾಖಲಾಗುತ್ತಿತ್ತು. ಆಗ ಕೇವಲ 16 ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. ಕೋವಿಡ್ ಸೋಂಕಿತರ ವರ್ತನೆಯಿಂದಾಗಿ ಈಗ ಸೋಂಕು ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಬೆಂಗಳೂರಿನಲ್ಲಿ ಹೆಚ್ಚು ಕಂಡುಬರುತ್ತಿದೆ.
ಈಗ ವೃದ್ಧರಿಂದ ಹಿಡಿದು ಮಕ್ಕಳ ವರೆಗೆ ಕುಟುಂಬಕ್ಕೆ ಕುಟುಂಬವೇ ಸೋಂಕು ತಗಲುತ್ತಿದೆ. ಕುಟುಂಬದವರು ಸರಿಯಾಗಿ ಐಸೋಲೇಷನ್ ಆಗದಿರುವುದೇ ಕಾರಣ ಎಂದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement