ದೇಶದ ಭದ್ರತೆಗೆ ಧಕ್ಕೆ ಆರೋಪ:ಜಮ್ಮು-ಕಾಶ್ಮೀರ ಮಾಜಿ ಸಿಎಂ ಪಾಸ್ ಪೋರ್ಟ್ ಅರ್ಜಿ ತಿರಸ್ಕೃತ:

ಶ್ರೀನಗರ: ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್ ಪೋರ್ಟ್ ಅರ್ಜಿ ತಿರಸ್ಕರಿಸಲಾಗಿದೆ.
ಈ ಬಗ್ಗೆ ಸ್ವತಃ ಮೆಹಬೂಬಾ ಮುಫ್ತಿ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇರೆಗೆ ನನ್ನ ಪಾಸ್ ಪೋರ್ಟ್ ಅರ್ಜಿಯನ್ನು ಪ್ರಾಧಿಕಾರ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಅಪರಾಧ ತನಿಖಾ ಸಂಸ್ಛೆ ಸಿಐಡಿ ನೀಡಿರುವ ವರದಿಯ ಆಧಾರದ ಮೇಲೆ ತಮ್ಮ ಪಾಸ್ ಪೋರ್ಟ್ ಅನ್ನು ತಿರಸ್ಕರಿಸಲಾಗಿದೆ ಎಂದು ಪಾಸ್ ಪೋರ್ಟ್ ಕಚೇರಿ ಮಾಹಿತಿ ನೀಡಿದೆ ಎಂದು ಮುಫ್ತಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಪಾಸ್ ಪೋರ್ಟ್ ಕಚೇರಿ ನೀಡಿರುವ ಪತ್ರವನ್ನೂ ಮುಫ್ತಿ ಸುದ್ದಿಗಾರರ ಮುಂದೆ ಪ್ರದರ್ಶನ ಮಾಡಿದರು.
ಕಳೆದ ವರ್ಷ ಮೇ 31 ರಂದು ತಮ್ಮ ಪಾಸ್‌ಪೋರ್ಟ್ ಅವಧಿ ಮುಗಿದಿದ್ದು, 2020 ರ ಡಿಸೆಂಬರ್ 11 ರಂದು ಹೊಸ ಪಾಸ್‌ಪೋರ್ಟ್ ನೀಡಲು ಅರ್ಜಿ ಸಲ್ಲಿಸಿದ್ದೆ. ಆದರೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕಾರಣ ನೀಡಿ ಮತ್ತು ಸಿಐಡಿ ವರದಿಯನ್ನಾಧರಿಸಿ ಪಾಸ್‌ಪೋರ್ಟ್ ನೀಡಲು ನಿರಾಕರಿಸಲಾಗಿದೆ. ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಪಾಸ್ ಪೋರ್ಟ್ ನೀಡಿದರೆ ಹೇಗೆ ದೇಶದ ಭದ್ರತೆಗೆ ಧಕ್ಕೆಯಾಗುತ್ತದೆ..? ಪಾಸ್‌ಪೋರ್ಟ್ ನೀಡುವುದು ಇಷ್ಟು ದೊಡ್ಡ ಸಾರ್ವಭೌಮತ್ವ ದೇಶಕ್ಕೆ ಹೇಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಮೆಹಬೂಬಾ, ಕೇಂದ್ರ ಸರ್ಕಾರದ ನೀತಿಗಳಿಗೆ ವಿರೋಧಿಸಲಾಗುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಪಕ್ಷಪಾತ ತೋರುತ್ತಿದೆ ಎಂದರು.
ಮನಿ ಲಾಂಡರಿಂಗ್ ಅಥವಾ ಹವಾಲಾ ಹಣ ವರ್ಗಾವಣೆ ವಿಚಾರವಾಗಿ ಇಡೀ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ವಿರುದ್ಧ ವಿಚಾರಣೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಪಹಲ್ಗಾಮ್‌ ದಾಳಿ | ಪಾಕ್ ಬೆಂಬಲಿಸಿದ್ದ ಟರ್ಕಿಗೆ ದೊಡ್ಡ ಹೊಡೆತ ನೀಡಿದ ಭಾರತ : ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಗೆ ಭದ್ರತಾ ಅನುಮತಿ ರದ್ದು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement