ಎರಡನೇ ಕೊರೊನಾ ಅಲೆ: ಬೆಂಗಳೂರಲ್ಲಿ ವೃದ್ಧರಿಗಿಂತ ಯುವಕರಿಗೇ ಹೆಚ್ಚು ಸೋಂಕು..!

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದ ಸರಿಸುಮಾರು ಶೇ.೬೦ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮಾರ್ಚ್ ಮಧ್ಯದಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗಿನಿಂದ ನಗರದಲ್ಲಿ ಹೆಚ್ಚಾಗಿ ಯುವಕರು ಹಾಗೂ ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಕಂಡುಬರುತ್ತಿರುವುದು ೨ನೇ ಅಲೆಯ ಕಳವಳಕಾರಿ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರದಾನಿ ಮೋದಿ ಜೊತೆಗಿನ ವರ್ಚ್ಯುಲ್‌ ಸಭೆಯಲ್ಲಿ ಎಲ್ಲ ವಯಸ್ಸಿನವರಿಗೂ ಕೊರೊನಾ ಲಸಿಕೆ ನೀಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಬೆಂಗಳೂರಿನ ವೈದ್ಯರು ೨೦-೩೯ ವರ್ಷ ವರ್ಷದವರಲ್ಲಿ ಹೆಚ್ಚಾಗಿ ಕೋವಿಡ್ -೧೯ ಕಂಡುಬರುತ್ತಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಆರೋಗ್ಯ ಸಚಿವ ಡಾ.ಸೂದಾಕರ ಸಹ ಮಾಧ್ಯಮದ ಮುಂದೆ ಹೇಳಿದ್ದಾರೆ. ಮೊದಲ ಕೊರೊನಾ ಅಲೆಯಲ್ಲಿ ವೃದ್ಧರಿಗೆ ಈ ಸೋಂಕು ಹೆಚ್ಚಾಗಿ ಕಂಡುಬಂದರೆ ೨ನೇ ಅಲೆಯು ೨೦-೩೯ ವರ್ಷದವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಮಾರ್ಚ್ ೧೭ಮತ್ತು ೨೬ ರ ನಡುವೆ ೨೦ರಿಂದ ವರ್ಷ ವಯಸ್ಸಿನ 39 ವರ್ಷದ ಸುಮಾರು ಐದು ಸಾವಿರದಷ್ಟು ಜನರಿಗೆ ಸೋಂಕು ಕಂಡುಬಂದಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ದತ್ತಾಂಶ ಹೇಳುತ್ತದೆ.
ವಿಶೇಷವೆಂದರೆ ವೃದ್ಧರಲ್ಲಿ ಎರಡನೇ ಅಲೆ ಸೋಂಕು ಮೊದಲನೇ ಅಲೆ ಸೋಂಕಿನ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆಯಿದೆ.
೬೦-೬೯ ವಯಸ್ಸಿನ ೧೧೭೦ ಮತ್ತು ೭೦ ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ೮೦೦ ಜನರಲ್ಲಿ ಈ ಸೋಂಕು ಕಂಡುಬಂದಿದೆ.
ವೈರಸ್ ಹರಡುವಿಕೆ ಜೊತೆಗೆ ಜನರು ಕೊವಿಡ್‌ ಮಾರ್ಗಸೂಚಿ ಪಾಲನೆ ಇತ್ಯಾದಿ ಅಂಶಗಳೂ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ತಜ್ಞರು ಹೇಳುತ್ತಾರೆ. ಮುಖ್ಯವಾಗಿ ೨೦-೩೯ ವಯಸ್ಸಿನವರು ತಮಗೇನೂ ಆಗುವುದಿಲ್ಲ ಎಮಬ ನಿರ್ಲಕ್ಷ್ಯದಲ್ಲಿ ಯಾವುದೇ ಕೊವಿಡ್‌ ನಿಯಮಾವಳಿಗಳನ್ನು ಪಾಲಿಸದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳುತ್ತಾರೆ.
ಮೊದಲ ಕೊವಿಡ್‌ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಪ್ರಸರಣ ದರ ಹೆಚ್ಚು. ಲಾಕ್‌ಡೌನ್‌ನಂತಹ ನಿರ್ಬಂಧಗಳು ಮೊದಲ ಅಲೆ ಸಮಯದಲ್ಲಿ ಹರಡುವುದನ್ನು ನಿರ್ಬಂಧಿಸಿದವು, ಜೊತೆಗೆ ಭಯ ಕೂಡ ಜನರು ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿತ್ತು. ಆದರೆ ಈಗ ಎರಡನೇ ಅಲೆಯ ಸಮಯದಲ್ಲಿ ಲಸಿಕೆಯ ಲಭ್ಯತೆ ಹಾಗೂ ಹೆಚ್ಚಿದ ಜನರ ಚಲನವಲನದ ಕಾರಣದಿಂದ ಯುವಕರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ.
ವಯಸ್ಸಾದವರಿಗೆ ಲಸಿಕೆಯನ್ನೂ ಕೊಡುತ್ತಿರುವುದ ಸಹ ಅವರಲ್ಲಿ ಸೋಂಕು ಕಡಿಮೆಯಾಗಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಜೊತೆಗೆ ಅವರು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಅವರಲ್ಲಿ ಪ್ರಕರಣಗಳು ಕಳೆದ ಸಲಕ್ಕೆ ಹೋಲಿಸಿದರೆ ಕಡಿಮೆಯಿದೆ ಎಂದು ಹಲವರು ವೈದ್ಯರು ಅಭಿಪ್ರಾಯಪಡುತ್ತಾರೆ.೨೦-೩೯ ವಯಸ್ಸಿನ ರೋಗಿಗಳಲ್ಲಿ ಸುಮಾರು ೧೫-೨೦% ಏರಿಕೆ ಕಂಡುಬಂದಿದೆ ಎನ್ನುವುದು ದತ್ತಾಂಶಗಳಿಂದ ಕಂಡುಬರುತ್ತದೆ.
ಕಿರಿಯ ಜನರಲ್ಲಿ ವೈರಸ್ ಹರಡುವುದು ಆತಂಕಕಾರಿಯಾದರೂ ಅವರು ಓಡಾಡುವುದು ಹೆಚ್ಚಿರುವುದರಿಂದ ಅವರಿಗೆ ಬರುವುದು ಸಹಜ, ಹೀಗಾಗಿ ಅವರಿಗೆ ಲಸಿಕೆ ಲಭ್ಯವಾಗುವಂತೆ ಮಾಡಬೇಕು ಎಂದು ಹಲವು ವೈದ್ಯರು ಅಭಿಪ್ರಾಯಪಡುತ್ತಾರೆ. ಆದರೆ ಎಲ್ಲದಕ್ಕಿಂತ ಉತ್ತಮ ಮಾರ್ಗೋಪಾಗಳೆಂದರೆ ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಈಗ ಇದನ್ನು ಪಾಲಿಸುವುದು ಕಡಿಮೆಯಾಗಿದ್ದರಿಂದ ಬೆಂಗಳೂರಲ್ಲಿ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಅದರಲ್ಲಿಯೂ ಯುವಕರಲ್ಲಿ ಮುಖ್ಯವಾಗಿ ಈ ಕಾರಣದಿಂದ ಹೆಚ್ಚಳವಾಗಿದೆ ಎನ್ನುತ್ತಾರೆ ಅವರು. ಈ ಕಾರಣಕ್ಕಾಗಿಯೇ ಸರ್ಕಾರ ಕಟ್ಟುನಿಟ್ಟಾಗಿ ಕೊವಿಡ್‌ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈಗ ಹೀಗೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದಾಗಿದೆ. ಹೀಗಾಗಿ ಕೊವಿಡ್‌ ನಿಯಮಾವಳಿಗಳನ್ನು ಇನ್ನೂ ಕೆಲವು ತಿಂಗಳು ಪಾಲಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement