ಏಪ್ರಿಲ್‌ ೧೬ರಿಂದ ರಾತ್ರಿ ವೇಳೆ ರೈಲುಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜಿಂಗ್‌ ನಿಷೇಧ

ನವದೆಹಲಿ: ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್​ಟಾಪ್​ಗಳನ್ನು ಚಾರ್ಜ್​ ಮಾಡುವುದನ್ನು ನಿಷೇಧಿಸಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ರೈಲುಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ತಪ್ಪಿಸಲು ರಾತ್ರಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಬಳಕೆಯನ್ನು ಭಾರತೀಯ ರೈಲ್ವೆ ನಿರ್ಬಂಧಿಸಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಈಗ ರಾತ್ರಿ ಸಮಯದಲ್ಲಿ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವ ಬೋರ್ಡ್‌ಗಳನ್ನು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ. ಎಪ್ರಿಲ್‌ ೧೬ರಿಂದ ಆದೇಶ ಅನುಷ್ಠಾನಗೊಳ್ಳಲಿದೆ. 2014 ರಲ್ಲಿ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ನಂತರ, ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಚಾರ್ಜಿಂಗ್ ಸೇವೆಗಳನ್ನು ಸ್ವಿಚ್ ಆಫ್ ಮಾಡಲು ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದರು. ಇದೀಗ ರೈಲ್ವೆ ಮಂಡಳಿ ಅಂತಿಮವಾಗಿ ಎಲ್ಲಾ ರೈಲು ವಲಯಗಳಿಗೆ ಈ ಆದೇಶಗಳನ್ನು ನೀಡಿದೆ.
ಪ್ರಸ್ತುತ, ರೈಲುಗಳ ಒಳಗೆ ಧೂಮಪಾನಿಗಳಿಗೆ ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಧೂಮಪಾನ ಮಾಡುವ ಪ್ರಯಾಣಿಕರಿಗೆ 100 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಲ್ಲದೇ ರೈಲುಗಳಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಪರಾಧಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1,000 ರೂ ಅಥವಾ ಎರಡನ್ನೂ ದಂಡವಾಗಿ ವಿಧಿಸಬಹುದು ಮತ್ತು ಸೆಕ್ಷನ್ 165 ರ ಅಡಿಯಲ್ಲಿ 500 ರೂ.ಗಳ ದಂಡವನ್ನು ಅನ್ವಯಿಸಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಓದಿರಿ :-   ರೋಡ್ ರೇಜ್ ಪ್ರಕರಣ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

2 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ