ಹಾಸನ ಜಿಲ್ಲಾ ಪಂಚಾಯತಿಗೆ ರಾಷ್ಟ್ರ ಪ್ರಶಸ್ತಿ

ಹಾಸನ: ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಪಂಚಾಯತಿಗಳ ಸಬಲೀಕರಣಕ್ಕೆ ಕೊಡಮಾಡುವ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಲ್ಲೆ ಆಯ್ಕೆಗೊಂಡಿದೆ.
ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳನ್ನು ಎಲ್ಲ ರೀತಿಯಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಲ್ಲಿ ಹಾಸನ ಜಿಲ್ಲಾ ಪಂಚಾಯತಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡುವ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತಿ ಸಶಕ್ತಿಕರಣ ಪುರಸ್ಕಾರಕ್ಕೆ ಪಾತ್ರವಾಗಿದೆ. ಎಪ್ರಿಲ್‌ ೨೪ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಗ್ರಾಮ ಮತ್ತು ತಾಲೂಕು ಪಂಚಾಯತಿಗಳಲ್ಲಿ ಸರಕಾರದ ವತಿಯಿಂದ ಬಿಡುಗಡೆಗೊಂಡ ಅನುದಾನ ಮತ್ತು ಅನುಷ್ಠಾನಗೊಂಡ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಡಿದ ಕಾರ್ಯವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರಿಸಿದ ಸರಕಾರದ ಸೌಲಭ್ಯ ಮತ್ತು ಅನುದಾನವನ್ನು ಸಂಪೂರ್ಣವಾಗಿ ವಿನಿಯೋಗಿಸಲಾಗಿದೆ.
ಇದೇ ರೀತಿ ವಿವಿಧ ಪ್ರಶಸ್ತಿಗಳಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬೆಂಗಳೂರು ಪೂರ್ವ, ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮ ಪಂಚಾಯತಿ, ಮಂಡ್ಯ ಜಿಲ್ಲೆ ಮದ್ದೂರ ತಾಲೂಕಿನ ಯಡಗನಹಳ್ಳಿ ಗ್ರಾಮ ಪಂಚಾಯತ, ಮೈಸೂರುಜಿಲ್ಲೆಯ ಹುಣಸೂರ ತಾಲೂಕಿನ ಕರಣಕಪ್ಪೆ ಗ್ರಾಮ ಪಂಚಾಯತ ಆಯ್ಕೆಗೊಂಡಿವೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement