ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

ಕಾರವಾರ : ಪುರಾಣ ಪ್ರಸಿದ್ದ ಗೋಕರ್ಣ ಮಹಾಗಣಪತಿ ಮಂದಿರದ ಪ್ರಾಚೀನ ಶಿಲಾಮೂರ್ತಿ ಸವಕಳಿಯ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಪರ್ಶ ದರ್ಶನ, ಪೂಜಾ ಸೇವೆಗಳನ್ನ ಬಂದ್ ಮಾಡಿ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಬುಧವಾರ ಸಂಜೆ ದೇವಾಲಯ ಆವಾರದಲ್ಲಿ ಕಾರವಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಹಾಗೂ ಮಂದಿರದ ಅರ್ಚಕರ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.
ಬಹು ಪುರಾತನ ವಿಶೇಷವಾದ ಗಣೇಶನ ಮೂರ್ತಿ ಹಲವು ವರ್ಷಗಳಿಂದ ಸವಕಳೆಯಾಗುತ್ತಲೇ ಬಂದಿತ್ತು, ಪ್ರಸ್ತುತ ಕೈ, ಭುಜ, ಎದೆ ಭಾಗದಲ್ಲಿ ಮತ್ತಷ್ಟು ಸವಕಳಿಯಾದ ಕಾರಣ ಅಭಿಷೇಕ, ಪೂಜೆ ನಿಷೇಧಿಸುವುದರ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಈ ಕ್ರಮ ತೆಗೆದುಕೊಂಡಿದ್ದಾರೆ. ಹೊಸ ಆದೇಶದಂತೆ, ಇನ್ನುಮುಂದೆ ಎಲ್ಲಾ ಭಕ್ತರು ದೂರದಿಂದಲೇ ಮಹಾಗಣಪತಿಯ ದರ್ಶನ ಪಡೆಯಬೇಕು. ದೇವರ ಮೂರ್ತಿಯನ್ನು ಸ್ಪರ್ಶಿಸುವುದು, ಅಭಿಷೇಕ ಮಾಡುವುದು ಅಥವಾ ನೇರ ಪೂಜಾ ಸೇವೆ ಸಲ್ಲಿಸುವುದಕ್ಕೆ ಅವಕಾಶ ಇರುವುದಿಲ್ಲ.ಪುರಾತನ ಗಣೇಶನ ಮೂರ್ತಿಯ ರಕ್ಷಣೆ ಸಲುವಾಗಿ ಸಾರ್ವಜನಿಕರು ಭಕ್ತರು ಸಹಕಾರ ನೀಡಬೇಕು ಎಂದು ಸಹಾಯಕ ಆಯುಕ್ತರು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಅಕ್ರಮ ವಲಸೆ ತಡೆಯಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement