ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ: ಕ್ರಿಕೆಟ್‌ ದಂತಕತೆ ೪೭ರ ಹರೆಯದ ಸಚಿನ್‌ ತೆಂಡೂಲ್ಕರ್‌ ಶುಕ್ರವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಮಾ.೨೭ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು.
ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದಗಳು. ವೈದ್ಯಕೀಯ ಸಲಹೆಯ ಮೇರೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಮನೆಗೆ ಮರಳಲಿದ್ದೇನೆ ಎಂದು ನಾನು ಭಾವಿಸಿದ್ದೇನೆ. ಆರೈಕೆ ಮಾಡಿ ಮತ್ತು ಎಲ್ಲರೂ ಸುರಕ್ಷಿತವಾಗಿರಿ” ಎಂದು ಸಚಿನ್ ಬರೆದಿದ್ದಾರೆ.
ರಾಯ್ಪುರದಲ್ಲಿ ಇತ್ತೀಚಿಗೆ ನಡೆದ ಲೆಜೆಂಡ್ಸ್‌ ಪಂದ್ಯಾವಳಿಯಲ್ಲಿ ಸಚಿನ್ ಇಂಡಿಯಾ ಲೆಜೆಂಡ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದು, ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ ಗೆಲುವು ಸಾಧಸಿತ್ತು. ಕ್ರೀಡಾಂಗಣಗಳ ಒಳಗೆ ಜನರಿಗೆ ಅನುಮತಿ ನೀಡಲಾಗಿತ್ತು. ತೆಂಡೂಲ್ಕರ್ ಅವರಲ್ಲದೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಅವರ ಹಿರಿಯ ಸಹೋದರ ಯೂಸುಫ್ ಮತ್ತು ಎಸ್ ಬದ್ರಿನಾಥ್ – ಇವರೆಲ್ಲರೂ ಇತ್ತೀಚೆಗೆ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಚಾಲೆಂಜ್ ಫಾರ್ ಇಂಡಿಯಾ ಲೆಜೆಂಡ್ಸ್‌ನಲ್ಲಿ ಭಾಗವಹಿಸಿದ್ದರು – ತಮಗೂ ಕೊವಿಡ್‌ ಸೋಂಕು ತಗುಲಿದೆ ಎಂದು ಹೇಳಿದ್ದರು.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement