ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟಾಗಿದೆ.
ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಫೈಟಿಂಗ್ ದೃಶ್ಯವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಟ ಉಪೇಂದ್ರ ಗಾಯಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ಆರ್. ಚಂದ್ರು ‘ಕಬ್ಜ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕನ್ನಡವಲ್ಲದೆ ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಇವೆ. ಅದಕ್ಕಾಗಿ ಹಲವು ಬಗೆಯ ಸೆಟ್ಗಳನ್ನು ಹಾಕಲಾಗಿದೆ. ಸಾಹಸ ನಿರ್ದೇಶಕ ರವಿವರ್ಮಾ ಮಾರ್ಗದರ್ಶನದಲ್ಲಿ ಫೈಟಿಂಗ್ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಹನಟ ರಾಡ್ ಬೀಸಿದಾಗ ಉಪೇಂದ್ರ ತಪ್ಪಿಸಿಕೊಳ್ಳಬೇಕಿತ್ತು. ಆದರೆ ಸಾಧ್ಯವಾಗದ ಕಾರಣ ರಿಯಲ್ ಸ್ಟಾರ್ ತಲೆಗೆ ಗಾಯವಾಗಿದೆ. ಪೆಟ್ಟಾಗಿದ್ದರೂ ಕೂಡ ಅವರು ಶೂಟಿಂಗ್ ಮುಗಿಸಿ ಮನೆಗೆ ತೆರಳಿದ್ದಾರಂತೆ.
ನಿಮ್ಮ ಕಾಮೆಂಟ್ ಬರೆಯಿರಿ