ನಕ್ಸಲ್‌ ಎನ್‌ಕೌಂಟರ್‌:ಐವರು ಭದ್ರತಾ ಸಿಬ್ಬಂದಿ ಸಾವು

ಛತ್ತೀಸ್ ಘಡದಲ್ಲಿ ಭೀಕರ ನಕ್ಸಲ್ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಐದು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಟರ್ರೇಮ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಎನ್ ಕೌಂಟರ್ ನಲ್ಲಿ ಐದು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ.
ಶನಿವಾರ ಬೆಳಿಗ್ಗೆ ಡಿಜಿಪಿ ಅವಸ್ಥಿ ಅವರು ಸುದ್ದಿಗೋಷ್ಠಿ ಕರೆದು ಓರ್ವ ಭದ್ರತಾ ಸಿಬ್ಬಂದಿ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಈ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ.
ನಕ್ಸಲರ ಪಾಳಯದಲ್ಲೂ ಸಾವು-ನೋವು: ಇನಕ್ಸಲರ ಪಾಳಯದಲ್ಲೂ ಭಾರಿ ಸಾವು-ನೋವು ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಎನ್ ಕೌಂಟರ್ ಪ್ರಗತಿಯಲ್ಲಿರುವುದರಿಂದ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಕನಿಷ್ಠ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರ ಇದ್ದಾರೆಂಬ ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್ ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಗೆ ಅಲ್ಲಿಗೆ ಹೊಗಿವೆ. ಸಿಆರ್ ಪಿಎಫ್ ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆ ನಡೆಸಿವೆ. ನಕ್ಸಲರ ಅಡಗುತಾಣದ ಮೇಲೆ ಭದ್ರತಾ ಪಡೆ ನುಗ್ಗುತ್ತಲೇ ಎಚ್ಚೆತ್ತ ನಕ್ಸಲರು ಗುಂಡಿನ ಸುರಿಮಳೆ ಗರೆದರು. ಈ ವೇಳೆ ಓರ್ವ ಭದ್ರತಾ ಸಿಬ್ಬಂದಿ ಬೆಳಗ್ಗೆ ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement