ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಪೆಟ್ಟು

ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾದ ಶೂಟಿಂಗ್​ ಸಮಯದಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟಾಗಿದೆ.
ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಫೈಟಿಂಗ್​ ದೃಶ್ಯವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಟ ಉಪೇಂದ್ರ ಗಾಯಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ಆರ್​. ಚಂದ್ರು ‘ಕಬ್ಜ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕನ್ನಡವಲ್ಲದೆ ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಇವೆ. ಅದಕ್ಕಾಗಿ ಹಲವು ಬಗೆಯ ಸೆಟ್​ಗಳನ್ನು ಹಾಕಲಾಗಿದೆ. ಸಾಹಸ ನಿರ್ದೇಶಕ ರವಿವರ್ಮಾ ಮಾರ್ಗದರ್ಶನದಲ್ಲಿ ಫೈಟಿಂಗ್​ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಹನಟ ರಾಡ್​ ಬೀಸಿದಾಗ ಉಪೇಂದ್ರ ತಪ್ಪಿಸಿಕೊಳ್ಳಬೇಕಿತ್ತು. ಆದರೆ ಸಾಧ್ಯವಾಗದ ಕಾರಣ ರಿಯಲ್​ ಸ್ಟಾರ್​ ತಲೆಗೆ ಗಾಯವಾಗಿದೆ. ಪೆಟ್ಟಾಗಿದ್ದರೂ ಕೂಡ ಅವರು ಶೂಟಿಂಗ್​ ಮುಗಿಸಿ ಮನೆಗೆ ತೆರಳಿದ್ದಾರಂತೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ನಿಮ್ಮ ಕಾಮೆಂಟ್ ಬರೆಯಿರಿ

advertisement