ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದ ಸರ್ಕಾರ : ಏ.7ರ ವರೆಗೆ ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ..!

ಬೆಂಗಳೂರು :ಕೊರೊನಾ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸೋಂಕು ಹೆಚ್ಚಿರುವಂತಹ ಬೆಂಗಳೂರು ನಗರ ಸೇರಿದಂತೆ 8 ಜಿಲ್ಲೆಗಳಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ನೀಡಿ ಹೊರಡಿಸಿದ್ದ ಆದೇಶವನ್ನು ಚಿತ್ರರಂಗದ ಒತ್ತಡಕ್ಕೆ ಮಣಿದು ಹೇಳಿದ ೨೪ ತಾಸಿನಲ್ಲೇ ವಾಪಸ್‌ ಪಡೆದಿದೆ. ಹಾಗೂ ಶೇ.೧೦೦ ಸೀಟುಗಳ ಭರ್ತಿಗೆ ಅವಕಾಶ ನೀಡಿದೆ.
ನಿರ್ಬಂಧದ ವಿರುದ್ಧ ಸ್ಯಾಂಡಲ್ ವುಡ್ ಚಿತ್ರರಂಗದ ಗಣ್ಯರು ಸಿಡಿದೆದ್ದಿದ್ದರು. ಇದೀಗ ಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಏಪ್ರಿಲ್ 7ರ ವರೆಗೆ 100 ಸೀಟುಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ಆಕ್ಷೇಪಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರ್ನಾಟಕ ಫಿಲ್ಮ್ ಛೇಂಬರ್ಸ್ ಆಫ್ ಕಾಮರ್ಸ್ ಭೇಟಿಯಾಗಿ ಚಿತ್ರಮಂದಿರಗಳ ಶೇ.100 ಸೀಟುಗಳ ಭರ್ತಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಚಿತ್ರಗಳನ್ನು ವೀಕ್ಷಿಸಲು ಸಿನಿ ಪ್ರೇಕ್ಷಕರು ಸೀಟುಗಳನ್ನು ಆನ್ ಲೈನ್ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸರ್ಕಾರ ಹೊರಡಿಸಿರುವ ಶೇ.50ರಷ್ಟು ಮಾತ್ರ ಸೀಟುಗಳ ಭರ್ತಿ ಆದೇಶದಿಂದ ವೀಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಶೇ.50ರಷ್ಟು ಸೀಟುಗಳ ಭರ್ತಿಯ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 7ರ ವರೆಗೆ ಚಿತ್ರಮಂದಿರಗಳ ಶೇ.100 ರಷ್ಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement