ಬಾಲಿವುಡ್‌ ನಟ ಗೋವಿಂದಾಗೆ ಕೊರೊನಾ ಸೋಂಕು

ಮುಂಬೈ: ಖ್ಯಾತ ಬಾಲಿವಿಡ್‌ ನಟ ಗೋವಿಂದ ಅವರು ಕೊರೊನಾಸೋಂಕಿಗೆ ಒಳಗಾಗಿದ್ದಾರೆ.
ಅವರೀಗ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಅವರ ಪತ್ನಿ ಸುನೀತಾ ಅಹುಜಾ ಭಾನುವಾರ ಹೇಳಿದ್ದಾರೆ. 57 ವರ್ಷದ ನಟನಿಗೆ ಕೊರೊನಾದ “ಸೌಮ್ಯ ಲಕ್ಷಣಗಳಿದ್ದು, ಅಗತ್ಯ ಕೊವಿಡ್‌ ಪ್ರೋಟೋಕಾಲ್ ಅನುಸರಿಸುತ್ತಿದ್ದಾರೆ.
ಗೋವಿಂದ ಅವರಿಗೆ ಭಾನುವಾರ ಬೆಳಿಗ್ಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಲಕ್ಷಣಗಳು ಸಂಪೂರ್ಣವಾಗಿ ಸೌಮ್ಯವಾಗಿವೆ. ಚಿಂತೆ ಮಾಡುವುದು ಏನೂ ಇಲ್ಲ. ಅವರು ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಸುನೀತಾ ತಿಳಿಸಿದ್ದಾರೆ. ನಟ ಅಕ್ಷಯಕುಮಾರ ಅವರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಈಗ ನಟ ಗೋವಿಂದ ಅವರಿಗೂ ಕೊರೊನಾ ಸೋಖು ತಗುಲಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ನಿಮ್ಮ ಕಾಮೆಂಟ್ ಬರೆಯಿರಿ

advertisement