ಭಾರತದಲ್ಲಿ ಭಾನುವಾರ 93 ಸಾವಿರ ದಾಟಿದ ಕೊರೊನಾ ಸೋಂಕು..ಇದು ಕಳೆದ ಸೆಪ್ಟಂಬರ್‌ ತಿಂಗಳ ಪ್ರಕರಣಗಳಷ್ಟು..!!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 93,249 ಕೊರೊನಾ ಸೋಂಕು ದಾಖಲಾಗಿದೆ ಮತ್ತು 513 ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ಬೆಳಿಗ್ಗೆ ತಿಳಿಸಿವೆ.
ದೇಶದಲ್ಲಿ ಉಲ್ಬಣವು ಮುಂದುವರೆದಿದ್ದು ಇದರೊಂದಿಗೆ, ದೇಶದ ಒಟ್ಟು ಸೋಂಕಿತರ ಸಂಖ್ಯೆ 1,24,85,509 ಕ್ಕೆ ಮತ್ತು ಸಾವಿನ ಸಂಖ್ಯೆ 1, 64,623 ಕ್ಕೆ ಏರಿದೆ.
ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮೂರನೇ ದೇಶವಾದ ಭಾರತವು ಶನಿವಾರ ಒಂದು ದಿನದಲ್ಲಿ 89,129 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿತ್ತು, ಇದು ಸುಮಾರು ಆರೂವರೆ ತಿಂಗಳಲ್ಲಿ ಗರಿಷ್ಠ ದೈನಂದಿನ ಏರಿಕೆ. ಕಳೆದ ವರ್ಷ ಸೆಪ್ಟೆಂಬರ್ 20 ರ ನಂತರ ಶನಿವಾರ ವರದಿಯಾದ ಕೊರೊನಾವೈರಸ್ ಕಾಯಿಲೆ ಪ್ರಕರಣಗಳ ಉಲ್ಬಣವು ಅತಿ ಹೆಚ್ಚು -ಸೆಪ್ಟೆಂಬರ್ 20 ದಿನ 24 ಗಂಟೆಗಳಲ್ಲಿ 92,605 ಸೋಂಕುಗಳು ದಾಖಲಾಗಿತ್ತು. ಈಗ 93,249 ಕೊರೊನಾ ಸೋಂಕು ದಾಖಲಾಗಿ ಅದನ್ನು ಮೀರಿಸಿದೆ.
ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 6,91,597 ಕ್ಕೆ ಏರಿಕೆಯಾಗಿದೆ. ವೈರಸ್ ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 1,16,29,289 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ 93.14 ಕ್ಕೆ ಇಳಿದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳ ಸಂಖ್ಯೆ 97,894 ಸೋಂಕುಗಳು ತಿಂಗಳ 17 ನೇ ದಿನದಂದು ದಾಖಲಾಗಿವೆ. ಅದರ ನಂತರ ಕೊರೊನಾ ವೈರಸ್ ಪ್ರಕರಣಗಳು ಕ್ರಮೇಣ ಕುಸಿತಕ್ಕೆ ಭಾರತ ಸಾಕ್ಷಿಯಾಗತೊಡಗಿತ್ತು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement