ಸಿಡಿ ಪ್ರಕರಣ : ಕಾಂಗ್ರೆಸ್‍ನ ಮಾಜಿ ಶಾಸಕರಿಬ್ಬರಿಗೆ ಎಸ್‍ಐಟಿ ನೊಟೀಸ್..?

ಬೆಂಗಳೂರು: ದಿನಕ್ಕೊಂದು ಬೆಳವಣಿಗೆ ಕಾಣುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರು ಕೇಳಿಬಂದಿದೆ. ಹೀಗಾಗಿ ಸಿಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುವಂತಾಗಿದೆ.
ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ಇಬ್ಬರು ಮಾಜಿ ಶಾಸಕರಿಗೆ ನೋಟಿಸ್ ನೀಡಲು ಎಸ್‍ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ., ಸಿಡಿಯ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳು ಸತತ ಐದು ದಿನಗಳ ಕಾಲ ಆಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಸಂರ್ಭದಲ್ಲಿ ಯುವತಿಯ ಮೊಬೈಲ್‍ ವಶಕ್ಕೆ ಪಡೆದು ಅಳಿಸಲಾಗಿದ್ದ ದತ್ತಾಂಶಗಳನ್ನು ರಿಟ್ರೈವ್ ಮಾಡಿದ ವೇಳೆ ಇಬ್ಬರು ಮಾಜಿ ಶಾಸಕರ ಜೊತೆ ಈ ಯುವತಿ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆ ಇಬ್ಬರು ಶಾಸಕರಿಗೆ ನೋಟಿಸ್ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಎಸ್‌ಐಟಿ ಮುಂದಾಗಿದೆ ಎನ್ನಲಾಗಿದೆ
ಯುವತಿ ಜೊತೆಗಿನ ಸಂಪರ್ಕ ಯಾವ ಕಾರಣಕ್ಕಾಗಿ ಇತ್ತು. ಯಾವೆಲ್ಲ ಮಾಹಿತಿಗಳು ಹಂಚಿಕೆಯಾಗಿವೆ, ಇವರ ಜೊತೆ ಬೇರೆ ಯಾರೆಲ್ಲ ಸಂಪರ್ಕ ಹೊಂದಿದ್ದರು ಎಂಬ ವಿಷಯಗಳ ಬಗ್ಗೆ ಮತ್ತಷ್ಟು ಸ್ಪಷ್ಟತೆಗೆ ನೋಟಿಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement