ದೀದಿ ಮುಖದಲ್ಲಿ ಸೋಲಿನ ಭೀತಿ ಕಾಣುತ್ತಿದೆ: ಅಧೀರ್‌ ರಂಜನ್‌

ಕೋಲ್ಕತ್ತ: ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ತಮ್ಮ ಪಕ್ಷ ಪಶ್ಚಿಮ ಬಂಗಾಳದಲ್ಲಿ ಪರಾಭವಗೊಳ್ಳುವ ಭೀತಿ ಉಂಟಾಗಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವಂತೆ ಕೋರಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ತಿಳಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಬೆರ್ಹಾಂಪುರದಲ್ಲಿ ನಡೆದ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಮಮತಾ ಬ್ಯಾನರ್ಜಿಗೆ ಸೋಲು ಖಚಿತವಾಗಿದೆ. ಅವರು ಸಹಾಯ ಕೋರಿ ಸೋನಿಯಾ ಗಾಂಧಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಸಹಾಯ ಕೋರಿದ್ದಾರೆ ಎಂದರು.
ಕೆಲವು ದಿನಗಳಿಂದ ನಂದಿಗ್ರಾಮದಲ್ಲೇ ಉಳಿದುಕೊಂಡು ಪ್ರಚಾರ ಮಾಡಿದ್ದು ಮಮತಾ ಮಾಡಿದ ಪ್ರಮಾದ. ತಪ್ಪು ರಣತಂತ್ರವನ್ನು ಅವರು ಅಳವಡಿಸಿಕೊಂಡರು. ಇದರಿಂದ ಅವರು ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡಂತಾಯಿತು ಎಂದರು.
ಟಿಎಂಸಿ ನೈತಿಕವಾಗಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಮಮತಾ ಅವರನ್ನು ನೋಡಿದರೆ ಅವರು ಸೋಲಿಗೆ ಮಾನಸಿಕವಾಗಿ ಸಿದ್ಧವಾಗಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದರು. ತೃಣಮೂಲ ಮತ್ತು ಬಿಜೆಪಿ ಬಂಗಾಳದಲ್ಲಿ ಕೋಮು ರಾಜಕಾರಣವನ್ನು ಆಮದು ಮಾಡಿಕೊಂಡಿದ್ದು, ಅದರ ಪರಿಣಾಮವನ್ನು ಅವು ಅನುಭವಿಸಬೇಕಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement