ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಎನ್.ವಿ.ರಮಣ ನೇಮಕ

ನವ ದೆಹಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಂಗಳವಾರ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.
ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ನ್ಯಾಯಮೂರ್ತಿ ರಮಣ ಅವರ ಹೆಸರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ನ್ಯಾಯಮೂರ್ತಿ ಬೊಬ್ಡೆ ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಎನ್.ವಿ.ರಮಣ ಅವರು ಏಪ್ರಿಲ್ 24 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು 2022 ಆಗಸ್ಟ್ 26ರ ವರೆಗೆ ಅಧಿಕಾರದಲ್ಲಿರುತ್ತಾರೆ.
ಏಪ್ರಿಲ್ 6 ರ ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರದ ಕಾರ್ಯದರ್ಶಿ ಬರುನ್ ಮಿತ್ರ, “ಭಾರತದ ಸಂವಿಧಾನದ 124 ನೇ ಪರಿಚ್ಛೆದ (2) ರ ಪ್ರಕಾರ ನ್ಯಾಯಮೂರ್ತಿ ನೂಥಲಪತಿ ವೆಂಕಟ ರಮಣ ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು, 2021 ರ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
2014 ರಲ್ಲಿಯೇ ನ್ಯಾಯಮೂರ್ತಿ ರಮಣ ಅವರನ್ನು ಸುಪ್ರೀಂಕೋರ್ಟ್‌ಗೆ ನೇಮಿಸಲಾಯಿತು. ಈ ಹಿಂದೆ ಅವರು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 24 ರಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನ್ಯಾಯಮೂರ್ತಿ ರಮಣ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಶಿಫಾರಸು ಮಾಡಿದರು. ಆಗಸ್ಟ್ 27, 1957 ರಂದು ಜನಿಸಿದ ನ್ಯಾಯಮೂರ್ತಿ ರಮಣ ಅವರು ಆಗಸ್ಟ್ 26, 2022 ರಂದು ನಿವೃತ್ತಿಯಾಗುವ ಮೊದಲು ಮುಖ್ಯ ನ್ಯಾಯಮೂರ್ತಿಯಾಗಿ ಸುಮಾರು 16 ತಿಂಗಳ ಅಧಿಕಾರಾವಧಿ ಹೊಂದಿರುತ್ತಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ