ಸಿಎಂ ಬಿಎಸ್‌ವೈ ಬದಲಾವಣೆಗೆ ಸಂಘ ಪರಿವಾರ ಬಯಸಿದೆ: ಸಿದ್ದರಾಮಯ್ಯ

posted in: ರಾಜ್ಯ | 0

ಮಸ್ಕಿ: ಬಸನಗೌಡ ಪಾಟೀಲ ಯತ್ನಾಳ ಹಾಗೂ ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್‌ ಬೆಂಬಲವಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸಲು ಸಂಘ ಪರಿವಾರ ಬಯಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರಕಾರಕ್ಕೆ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯಿಲ್ಲ. ಸಚಿವ ಈಶ್ವರಪ್ಪ ಪತ್ರ ಬರೆದಿರುವುದು ಗಂಭೀರ ವಿಚಾರ. ಯತ್ನಾಳ ನಾಲ್ಕು ತಿಂಗಳುಗಳಿಂದ ವಾಗ್ದಾಳಿ ನಡೆಸುತ್ತಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದ ಪ್ರಶ್ನಿಸಿದರು. ಮಂತ್ರ ಮಂಡಲದಲ್ಲಿ ಎಲ್ಲವೂ ಸರಿಯಿಲ್ಲ ಎಂದರು.
ವರುಣ ಕ್ಷೇತ್ರಕ್ಕೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೊಡುಗೆ ಏನಿದೆ? ವರುಣ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಿದರೂ ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ