೩ನೇ ಹಂತದ ಚುನಾವಣೆ ದಿನವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಪತ್ನಿಯ ಹತ್ಯೆ

ಗೋಘಾಟ್: ಮೂರನೇ ಹಂತದ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರಾಜಕೀಯ ಹತ್ಯೆಯಾಗಿದೆ. ಚುನಾವಣಾ ಹಿಂಸಾಚಾರಕ್ಕೆ ಹೆಸರಾದ ಪಶ್ಚಿಮ ಬಂಗಾಳದಲ್ಲಿ ಈ ಚುನಾವಣೆಯಲ್ಲಿಯೂ ಸಾಕಷ್ಟು ಹಿಂಸಾಚಾರವಾಗಿದೆ.
ಹೂಗ್ಲಿ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಪತ್ನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಗೋಘಾಟ್ ಪ್ರದೇಶದಲ್ಲಿ ಪ್ರಕ್ಷ್ಯುಬ್ದ ಪರಿಸ್ಥಿತಿ ಇದೆ.
ಇಲ್ಲಿನ ಬಿಜೆಪಿ ಮುಖಂಡರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪತಿ ಮೇಲಿನ ಹಲ್ಲೆ ತಡೆಯಲು ಬಂದ ಪತ್ನಿ ಮಾಧಾಭಿ ಅಡಾಕ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಬಿಜೆಪಿ ದೂರು ದಾಖಲಾಗಿದ್ದು, ಪರಾರಿಯಾಗಿರುವ ಕೊಲೆ ಆರೋಪಿಗಳಿಗಾಗಿ ಶೋಧ ನಡೆದಿದೆ. ಈ ಹತ್ಯೆಗೆ ತೃಣಮೂಲ ಕಾಂಗ್ರೆಸ್ನವರೇ ಕಾರಣ ಎಂದು ಅಡಾಕ್ ಕುಟುಂಬ ಆರೋಪಿಸಿದ್ದು, ಆದರೆ, ಈ ಆರೋಪವನ್ನು ಆಡಳಿತ ಪಕ್ಷ ಇದನ್ನು ತಳ್ಳಿಹಾಕಿದೆ. ಆದರೆ ಗೋಘಾಟಿನಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ