ಆರ್‌ಬಿಐ ವಿತ್ತೀಯ ನೀತಿ ಪ್ರಕಟದ ನಂತರ 4 ತಿಂಗಳಲ್ಲಿ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ನೀತಿ ಪ್ರಟಿಸಿದ ನಂತರ ಬುಧವಾರದ ವಹಿವಾಟಿನಲ್ಲಿ ರೂಪಾಯಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಜಿ-ಸೆಕ್ ಸ್ವಾಧೀನ ಕಾರ್ಯಕ್ರಮ 1.0 (ಜಿಎಸ್ಎಪಿ) ಅಡಿಯಲ್ಲಿ ಈ ತ್ರೈಮಾಸಿಕದಲ್ಲಿ (ಕ್ಯೂ 1) ದ್ವಿತೀಯ ಮಾರುಕಟ್ಟೆಯಲ್ಲಿ 1 ಲಕ್ಷ ಕೋಟಿ ಬಾಂಡ್‌ಗಳನ್ನು ಖರೀದಿಸುವುದಾಗಿ ಕೇಂದ್ರ ಬ್ಯಾಂಕ್ ಘೋಷಿಸಿದೆ. ಅಮೆರಿಕದ ಡಾಲರ್‌ ವಿರುದ್ಧ ಭಾರತೀಯ ಕರೆನ್ಸಿ 1.5% ಕುಸಿದು 74.55 ರೂ.ಗಳಿಗೆ ತಲುಪಿದೆ. ಆಗಸ್ಟ್ 2019ರಿಂದ ಈಚೆಗೆ ಇದು ಅತಿದೊಡ್ಡ ಏಕದಿನ ಕುಸಿತವಾಗಿದೆ.ಮಂಗಳವಾರ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 74.43 ಕ್ಕೆ ತಲುಪಿತ್ತು.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಅನಿಶ್ಚಿತತೆಯ ವಾತಾವರಣ ಸೃಷ್ಟಿಸಿವೆ, ಈಗಾಗಲೇ ದುರ್ಬಲವಾಗಿರುವ ಚೇತರಿಕೆಯ ಸ್ಥಿತಿಗೆ ಅಪಾಯವನ್ನುಂಟು ಮಾಡುತ್ತಿರುವುದರಿಂದ ಭಾರತೀಯ ರೂಪಾಯಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಹೇಳಲಾಗಿದೆ.
ಆರ್‌ಬಿಐ ತನ್ನ ವಿತ್ತೀಯ ನೀತಿ ಪರಿಶೀಲನೆಯಲ್ಲಿ ಸತತ ಐದನೇ ಸಭೆಯ ನೀತಿ ದರಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಂಡಿದೆ,
ರಿಲಿಗೇರ್ ಬ್ರೋಕಿಂಗ್ ದೇಶೀಯ ಕರೆನ್ಸಿಯ ಹತ್ತಿರದ ಅವಧಿಯ ಬೆಂಬಲವನ್ನು 74.50 ಕ್ಕೆ ನಿಗದಿಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿನಿಮಯ ದರವು ಪ್ರತಿ ಡಾಲರ್‌ಗೆ 73.50-74.50 ರೂಪಾಯಿಗಳ ನಡುವೆ ವಹಿವಾಟು ನಡೆಸಲಿದೆ ಎಂಬ ನಿರೀಕ್ಷೆಯಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ