ಈ ಹಣಕಾಸು ವರ್ಷದ ಮೊದಲ ವಿತ್ತೀಯ ನೀತಿ ಪ್ರಕಟ: ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ, ಶೇ.10.5 ಆರ್ಥಿಕ ಬೆಳವಣಿಗೆಯ ಅಂದಾಜು

ಮುಂಬೈ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹೊತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಇರುವಂತಹ ಸಂದರ್ಭದಲ್ಲಿ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಪಾಡಿದೆ.
ಬುಧವಾರ ಮುಂಬೈಯಲ್ಲಿ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದ ವಿತ್ತೀಯ ನೀತಿ ಪ್ರಕಟಿಸಿದ್ದು ರೆಪೊ ದರವನ್ನು ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಇಟ್ಟು ಯಥಾಸ್ಥಿತಿ ಮುಂದುವರಿಸಿದೆ. ಆರ್ಥಿಕ ಬೆಳವಣಿಗೆಯ ದರ ಸಹ ಶೇಕಡಾ 10.5ರಷ್ಟು ಹಣಕಾಸು ವರ್ಷ 2021-22ರಲ್ಲಿ ಇರಬಹುದು ಎಂದು ಅಂದಾಜಿಸಿದೆ.
ಹಣಕಾಸು ವಿತ್ತೀಯ ನೀತಿ(ಎಂಪಿಸಿ) ಹಣದುಬ್ಬರ ಹೊಸ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಳೆದ ಜನವರಿಯಿಂದ ಮಾರ್ಚ್ ವರೆಗೆ ಇದ್ದ ಶೇಕಡಾ 5ಕ್ಕಿಂತ ಈಗಿನ ಆರ್ಥಿಕ ಸಾಲಿನ ತ್ರೈಮಾಸಿಕದಲ್ಲಿ ಶೇಕಡಾ 4.4ರಷ್ಟು ಅಂದಾಜಿಸಿದೆ.

ಕೋವಿಡ್ -19 ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ ತಡೆಹಿಡಿಯುತ್ತದೆ ಎಂದುಬುಧವಾರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರು ಸದಸ್ಯರ ಹಣಕಾಸು ವಿತ್ತೀಯ ನೀತಿಯ ಮೂರು ದಿನಗಳ ಸಭೆ ಮುಗಿದ ಬಳಿಕ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವನ್ನು ರೆಪೊ ಎಂದು ಹೇಳಲಾಗುತ್ತದೆ. ಈಗಕೊವಿಡ್‌ ಹೆಚ್ಚಳದ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟು ಮೊದಲ್ಲಿದ್ದ ರೆಪೊ ದರವನ್ನೇ ಮುಂದುವರಿಸಲಾಗಿದೆ. ಸಾಮಾನ್ಯವಾಗಿ ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತದೆ.
ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.ಇದನ್ಜು ಕೂಡ ಆರ್‌ಬಿಯ ಬದಲಾಯಿಸಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement