ಕೊರೊನಾ ಸೋಂಕಿನ ಲಸಿಕೆ ಹೊಸ ಸ್ಟಿಕ್ಕರ್ ಗಳನ್ನು ಪರಿಚಯಿಸಿದ ವಾಟ್ಸಪ್‌

ವಿಶ್ವದ ಸೋಷಿಯಲ್ ಮೀಡಿಯಾ ದೈತ್ಯ ವಾಟ್ಸಪ್ ತನ್ನ ಬಳಕೆದಾರರಿಗೆ ಕೊರೊನಾ ಸೋಂಕಿನ ಲಸಿಕೆಯ ಹೊಸ ಸ್ಟಿಕ್ಕರ್ ಗಳನ್ನು ಪರಿಚಯಿಸಿದೆ. ಈ ಸ್ಟಿಕ್ಕರ್ ಮೂಲಕ, ಕೊರೋನಾ ಲಸಿಕೆ ಪಡೆಯುತ್ತರಿವವರಿಗೆ, ಪಡೆಯುವವರಿಗೆ ಪ್ರೇರಣೆ ನೀಡಲು ಮುಂದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಸಹಯೋಗದೊಂದಿಗೆ ಹೊಸ ಸ್ಟಿಕರ್ ಪ್ಯಾಕ್ ಬಿಡುಗಡೆ ಮಾಡಿರುವ ವಾಟ್ಸಪ್, ಕೋವಿಡ್-19 ಲಸಿಕೆ ಪಡೆಯಲು ಬಳಕೆದಾರರಿಗೆ ಸ್ಫೂರ್ತಿ ನೀಡಲು ‘ಎಲ್ಲರಿಗೂ ಲಸಿಕೆಗಳು’ ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಪರಿಚಯಿಸಿದೆ. ಹೊಸ ಸ್ಟಿಕ್ಕರ್ ಗಳ ಪ್ಯಾಕ್ ಅನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ವಾಟ್ಸ್ ಆಪ್ ಟ್ವಿಟ್ ನಲ್ಲೂ ಮಾಹಿತಿ ಹಂಚಿಕೊಂಡಿದ್ದು, ವ್ಯಾಕ್ಸಿನ್ ಫಾರ್ ಆಲ್ ಪ್ಯಾಕ್ ಸ್ಟಿಕ್ಕರ್ ಡಬ್ಲ್ಯೂಹೆಚ್‌ಒ ಅಭಿವೃದ್ಧಿಪಡಿಸಿದ 23 ವಿಭಿನ್ನ ಸ್ಟಿಕ್ಕರ್ ಗಳನ್ನು ಒಳಗೊಂಡಿದೆ. ಸ್ಟಿಕ್ಕರ್ ಗಳ ಪ್ಯಾಕ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಡೌನ್ ಲೋಡಿಗೆ ಲಭ್ಯವಿದೆ. ಕೊರೊನಾಗೆ ಸಂಬಂಧಿಸಿದಂತೆ ನಿಮ್ಮ ಸಂತೋಷ, ರಿಲೀಫ್ ಹಾಗೂ ಕೊರೊನಾ ಹೆಲ್ತ್ ಕೇರ್ ವರ್ಕರ್ ಬಗ್ಗೆ ಹೊಸ ಸ್ಟಿಕ್ಕರ್ ಮೂಲಕ ಅಭಿವ್ಯಕ್ತಿಸಬಹುದು ಎಂಬುದಾಗಿ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement