ಚೆಕ್​ಬೌನ್ಸ್​ ಪ್ರಕರಣ; ಸ್ಟಾರ್‌ ದಂಪತಿ ಶರತ್‌ ಕುಮಾರ್​-ರಾಧಿಕಾಗೆ ಒಂದು ವರ್ಷ ಜೈಲು

ಚೆಕ್​ಬೌನ್ಸ್​ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶರತ್​ ಕುಮಾರ್​ ಮತ್ತು ಪತ್ನಿ, ನಟಿ ರಾಧಿಕಾ ಶರತ್​ಕುಮಾರ್​ ಅವರಿಗೆ ಬುಧವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಚೆನ್ನೈನ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಈ ತಾರಾದಂಪತಿ ವಿರುದ್ದ ಬಾಕಿ ಇದ್ದ ಎರಡು ಚೆಕ್​ಬೌನ್ಸ್​ ಪ್ರಕರಣಗಳಲ್ಲಿನ ಕ್ರಿಮಿನಲ್​ ಮೊಕದ್ದಮೆ ರದ್ದುಗೊಳಿಸಲು 2019ರಲ್ಲಿ ಮದ್ರಾಸ್​​ ಹೈ ಕೋರ್ಟ್​ ನಿರಾಕರಿಸಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ತಾರಾ ದಂಪತಿಗೆ ಒಂದು ವರ್ಷ ಸಜೆ ವಿಧಿಸಿ ಆದೇಶ ನೀಡಿದೆ.
2014ರಲ್ಲಿ ಶರತ್​ ಕುಮಾರ್​ ಮತ್ತು ರಾಧಿಕಾ ಪಾಲುದಾರಿಕೆಯ ಮ್ಯಾಜಿಕ್​ ಫ್ರೇಂ ಸಂಸ್ಥೆಯು ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್​ ನಟನೆಯಲ್ಲಿ ವಾಟ್​ ಎ ಮ್ಯಾಜಿಕ್​ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ರೆಡಿಯನ್ಸ್​ ಎಂಬ ಮೀಡಿಯಾ ಫೈನಾನ್ಸ್​ ಕಂಪನಿಯಿಂದ ಇವರಿಬ್ಬರು ಮಾಜ್ಯಿಕ್​ ಪ್ರೇಮ್ಸ್​ ಎಂಬ ಕಂಪನಿಗಾಗಿ​ 1. 5 ಕೋಟಿ ರೂ. ಹಣ ಸಾಲ ಪಡೆದಿದ್ದರು. 2015ರಲ್ಲಿ ಮರಳಿಸುವುದಾಗಿ ಹೇಳಿದ್ದರು. ಆದರೆಈ ದಂಪತಿ ಮಾತು ತಪ್ಪಿದ್ದರು. ಈ ಹಣ ಬಳಸಿಕೊಂಡು ಈ ತಾರಾ ದಂಪತಿ ಮತ್ತೊಂದು ಚಿತ್ರ ನಿರ್ಮಾಣ ಮಾಡಿದ್ದರು. ಬಳಿಕ ಈ ಹಣವನ್ನು ಎರಡು ಚೆಕ್​ ಮೂಲಕ ಹಿಂತಿರುಗಿಸಿದ್ದರು.
, ಈ ಚೆಕ್​ಗಳು ಬೌನ್ಸ್​ ಆಗಿತ್ತು. ಇದಾದ ಬಳಿಕ ರೇಡಿಯನ್ಸ್​ ಸಂಸ್ಥೆ ಮ್ಯಾಜಿಕ್​ ಫ್ರೇಮ್ಸ್​ ಸಂಸ್ಥೆ ಚೆಕ್​ ಬೌನ್ಸ್​ ಆರೋಪದ ಅಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಈ ವೇಳೆ ಬಡ್ಡಿ ಹೆಚ್ಚಿರುವ ಕಾರಣ ಹಣವನ್ನು ತಕ್ಷಣಕ್ಕೆ ಮರು ಪಾವತಿಸಲು ಸಾಧ್ಯವಿಲ್ಲ ಎಂದು ಮ್ಯಾಜಿಕ್​ ಫ್ರೇಮ್ಸ್​ ಸಂಸ್ಥೆ ವಾದಿಸಿತು. ಸಾಲ ಮರುಪಾವತಿಗೆ ಚೆಕ್​ ನೀಡಿದ ಬಳಿಕವೂ ಅದು ಬೌನ್ಸ್​ ಆಗಿತ್ತು. ಈ ಆರೋಪದ ಹಿನ್ನಲೆ ಈ ದಂಪತಿ ಹಾಗೂ ನಿರ್ಮಾಪಕ ಲಿಸ್ಟಿನ್​ ಸ್ಟೇಪನ್‌ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ರೈಲ್ವೇ ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಯಾದವ್, ಕುಟುಂಬದ ಸದಸ್ಯರ ವಿರುದ್ಧ ನ್ಯಾಯಾಲಯಕ್ಕೆ ಸಿಬಿಐ ಆರೋಪಟ್ಟಿ ಸಲ್ಲಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement