ಮುಕೇಶ ಅಂಬಾನಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ: ಫೋರ್ಬ್ಸ್‌ ಪಟ್ಟಿ

‌ ನ್ಯೂಯಾರ್ಕ್‌: ರಿಲಾಯನ್ಸ್‌ ಇಂಡಸ್ಟ್ರೀಜ್‌ ಚೇರಮನ್‌ ಮುಕೇಶ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ಚೀನಾದ ಉದ್ಯಮಿ ಜಾಕ್‌ ಮಾ ಅವರನ್ನು ಹಿಂದಿಕ್ಕಿದ್ದಾರೆ.
ಪ್ರತಿಷ್ಠಿತ ಫೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅಂಬಾನಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ೧೦ನೇ ಸ್ಥಾನ ಗಳಿಸಿದ್ದಾರೆ. ಅವರ ಒಟ್ಟು ಆಸ್ತಿ ೮೪.೫ ಶತಕೋಟಿ ಡಾಲರ್‌ಗಳು. ಅಮೇಜಾನ್‌ ಸಿಇಒ ಜೆಫ್‌ ಬೆಜೋಸ್‌ ಸತತ ೪ನೇ ವರ್ಷ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಅವರ ಆಸ್ತಿ ೧೭೭ ಶತಕೋಟಿ ಡಾಲರ್‌ಗಳು. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿಯಲ್ಲಿ ೬೪ ಶತಕೋಟಿ ಡಾಲರ್‌ ಹೆಚ್ಚಳವಾಗಿದೆ. ೧೫೧ ಶತಕೋಟಿ ಡಾಲರ್‌ ಆಸ್ತಿ ಹೊಂದಿದ ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ದ್ವಿತಿಯ ಸ್ಥಾನದಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement