ಕೇರಳ ಸಿಎಂ ಪಿಣರಾಯಿಗೆ ಕೊರೊನಾ ಸೋಂಕು

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗುರುವಾರ ಕೊರೋನಾ ಸೊಂಕು ದೃಢಪಟ್ಟಿದೆ.
75 ವರ್ಷದ ಪಿಣರಾಯಿ ವಿಜಯನ್ ಅವರಿಗೆ ಯಾವುದೇ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಅವರನ್ನೂ ಕಣ್ಣೂರಿನಲ್ಲಿರುವ ಮನೆಯಿಂದ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ವಿಜಯನ್ ಅವರ ಮಗಳು ವೀಣಾ ಮತ್ತು ಅಳಿಯ ಮೊಹಮ್ಮದ್ ರಿಯಾಜ್ ಅವರಿಗೆ ಏಪ್ರಿಲ್ 6 ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಮುಖ್ಯಮಂತ್ರಿ ತಮ್ಮ ಮಗಳ ಸಂಪರ್ಕದಲ್ಲಿದ್ದಿದ್ದರಿಂದ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ವರದಿ ಸಹ ದೃಢಪಟ್ಟಿದೆ.
ಪಿಣರಾಯಿ ವಿಜಯನ್ ಅವರು ಮಾರ್ಚ್ 3 ರಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ