ಕೊವಿಡ್‌-19 ಲಸಿಕೆಯ ಎರಡನೇ ಡೋಸ್‌ ಪಡೆದ ಪ್ರಧಾನಿ ಮೋದಿ

ನವ ದೆಹಲಿ: ದೆಹಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಎರಡನೇ ಡೋಸ್ ಕೊರೊನಾ ವೈರಸ್‌ ಲಸಿಕೆ ಪಡೆದರು. ಮಾರ್ಚ್ 1 ರಂದು ಪ್ರಧಾನ ಮಂತ್ರಿಗೆ ಕೋವಾಕ್ಸಿನ್‌ನ ಮೊದಲ ಪ್ರಮಾಣ ನೀಡಲಾಗಿತ್ತು.
ಗುರುವಾರ ಏಮ್ಸ್‌ನಲ್ಲಿ ನಾನು ಎರಡನೇ ಡೋಸ್ ಕೊವಿಡ್‌-19 ಲಸಿಕೆ ಪಡೆದೆ. ವೈರಸ್ ಅನ್ನು ಸೋಲಿಸಲು ಲಸಿಕೆ ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಒಂದಾಗಿದೆ. ನೀವು ಲಸಿಕೆಗೆ ಅರ್ಹರಾಗಿದ್ದರೆ, ಶೀಘ್ರದಲ್ಲೇ ನಿಮ್ಮ ಶಾಟ್ ಪಡೆಯಿರಿ ”ಎಂದು ಪಿಎಂ ಮೋದಿ ಅವರು ಲಸಿಕೆಗಾಗಿ ನೋಂದಾಯಿಸಲು ಪೋರ್ಟಲ್‌ನ ಕೋವಿನ್ ವೆಬ್‌ಸೈಟ್‌ಗೆ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ. ಹಾಗೂ ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇಬ್ಬರು ದಾದಿಯರಾದ ಪುದುಚೇರಿಯ ಪಿ.ನಿವೇದ ಮತ್ತು ಪಂಜಾಬ್‌ನ ನಿಶಾ ಶರ್ಮಾ ಡೋಸ್‌ ನೀಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ