ಕೋವಿಡ್ ಲಸಿಕೆ ಕೊರತೆಯಿಂದ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್‌: ಸುಪ್ರಿಯಾ ಸುಳೆ ಟ್ವೀಟ್‌

ಕೋವಿಡ್ -19 ಲಸಿಕೆಗಳ ಕೊರತೆಯಿಂದಾಗಿ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಲೋಕಸಭಾ ಸಂಸದ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್‌ಸಿಪಿ) ಪಕ್ಷದ ನಾಯಕಾರ ಸುಪ್ರಿಯಾ ಸುಳೆ ಬುಧವಾರ ಟ್ವೀಟ್‌ ಮಾಡಿದ್ದಾರೆ.
ಲಸಿಕೆ ಪಡೆಯದೆ ಹಲವಾರು ಜನರು ಮನೆಗೆ ಮರಳಬೇಕಾಯಿತು ಎಂದು ಎನ್‌ಸಿಪಿ ನಾಯಕಿ ಆರೋಪಿಸಿದ್ದಾರೆ.
ಪುಣೆ ಜಿಲ್ಲೆಯು ಬುಧವಾರ 391 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ 55,539 ಜನರಿಗೆ ಲಸಿಕೆ ಹಾಕಿದೆ. ಲಸಿಕೆಗಳ ದಾಸ್ತಾನು ಖಾಲಿಯಾಗಿದ್ದರಿಂದ ಸಾವಿರಾರು ಜನರು ಲಸಿಕೆ ಹಾಕದೆ ಹಿಂತಿರುಗಿದರು” ಎಂದು ಟ್ವೀಟ್ ನಲ್ಲಿ ಸುಪ್ರಿಯಾ ಸುಳೆ ಹೇಳಿದ್ದಾರೆ.
109 ಕೇಂದ್ರಗಳು ಲಸಿಕೆಗಳ ಸಂಗ್ರಹವಿಲ್ಲದ ಕಾರಣ ಮುಚ್ಚಲ್ಪಟ್ಟವು. ಸ್ಟಾಕ್ ಕೊರತೆಯಿಂದಾಗಿ ವೇಗ ಕಳೆದುಕೊಳ್ಳಬಹುದು, ಜೀವಗಳನ್ನು ಉಳಿಸಲು, ಸೋಂಕಿನ ಸರಪಳಿಯನ್ನು ಮುರಿಯಲು ಮತ್ತು ನಮ್ಮ ಆರ್ಥಿಕತೆ ಮರಳಿ ಪಡೆಯಲು ಒಪ್ಪುವ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ನೀಡಲು ನಾವು ದೃಢ ನಿಶ್ಚಯದಲ್ಲಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೊವಿಡ್- 19 ಲಸಿಕೆಗಳಿಗೆ ದಯೆಯಿಂದ ಸಹಾಯ ಮಾಡಲು ಗೌರವಾನ್ವಿತ ಡಾ. ಹರ್ಷ್ ವರ್ಧನ್ ಜಿ ಅವರನ್ನು ವಿನಂತಿಸುತ್ತಿದ್ದೇನೆ” ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು ರಾಜ್ಯಾದ್ಯಂತ ಲಸಿಕೆಗಳು ಕೇವಲ ಮೂರು ದಿನಗಳಷ್ಟು ಮಾತ್ರ ಸಂಗ್ರಹವಿದೆ. ಕೇಂದ್ರ ಸರ್ಕಾರ ವ್ಯಾಕ್ಸಿನೇಶನ್‌ ಪೂರೈಕೆ ವೇಗ ಹೆಚ್ಚಿಸಬೇಕು ಎಂದು ಕೋರಿದ ಬೆನ್ನಲ್ಲೇ ಸುಪ್ರಿಯಾ ಸುಳೆ ಅವರಿಂದ ಈ ಟ್ವೀಟ್‌ ಬಂದಿದೆ.
ಭೀಕರ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ತೋಪೆ ಹೇಳಿದ್ದರು.
ಬುಧವಾರ 14 ಲಕ್ಷ ಡೋಸ್ ಲಭ್ಯವಿದೆ, ಅಂದರೆ ಕೇವಲ ಮೂರು ದಿನಗಳ ಸ್ಟಾಕ್ ಇದೆ. ಪ್ರತಿ ದಿನ 5 ಲಕ್ಷ ಲಸಿಕೆ ಹಾಕಿದರೆ ಪ್ರತಿ ವಾರ ನಮಗೆ 40 ಲಕ್ಷ ಡೋಸ್ ಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವರು ಹೇಳಿದ್ದರು.
ಏತನ್ಮಧ್ಯೆ, ಪುಣೆ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 10,907 ಹೊಸ ಕೋವಿಡ್ -19 ಪ್ರಕರಣಗಳು, 62 ಸಾವುಗಳು ಸಂಭವಿಸಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ.
ಇದರೊಂದಿಗೆ, ಒಟ್ಟು ಕೋವಿಡ್ -19 ಪ್ರಕರಣಗಳು 6,04,037 ಕ್ಕೆ ಏರಿವೆ, ಇದರಲ್ಲಿ 84,526 ಸಕ್ರಿಯ ಪ್ರಕರಣಗಳಿವೆ. ಸಾವಿನ ಸಂಖ್ಯೆ 10,402 ಕ್ಕೆ ಏರಿದೆ.
ಬುಧವಾರದ ಕೇಂದ್ರದ ಆರೋಗ್ಯ ಇಲಾಖೆ ನೀಡಿದ ವರದಿಯಂತೆ 1,15,736 ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ, ಭಾರತ ಬುಧವಾರ ತನ್ನ ದೈನಂದಿನ ಗರಿಷ್ಠ ಏರಿಕೆ ದಾಖಲಿಸಿದೆ.ಏರಿಕೆಯೊಂದಿಗೆ, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,28,01,785 ಕ್ಕೆ ತಲುಪಿದೆ.
ಬುಧವಾರದ ಕೇಂದ್ರದ ಆರೋಗ್ಯ ಇಲಾಖೆ ನೀಡಿದ ವರದಿಯಂತೆ ದೇಶವು ಒಂದು ದಿನದಲ್ಲಿ 630 ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 8,43,473. ಒಟ್ಟು ಸಾವಿನ ಸಂಖ್ಯೆ 1,66,177 ಕ್ಕೆ ಏರಿದೆ.
ದೇಶದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ದಾಖಲಿಸುವ ಮಹಾರಾಷ್ಟ್ರವು ಅತ್ಯಂತ ಪೀಡಿತ ರಾಜ್ಯವಾಗಿ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 59,907 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 322 ಸಾವುಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement