ಕೇಂದ್ರ ಸರ್ಕಾರ ೧೦ ಕೋಟಿ ರೂ. ಪರಿಹಾರದ ಠೇವಣಿ ಇರಿಸಿದರೆ ಮಾತ್ರವೇ ಇಟಲಿ ನಾವಿಕರಿಗೆ ಮುಕ್ತಿ: ಸುಪ್ರೀಂಕೋರ್ಟ್‌

ನವ ದೆಹಲಿ: ಕೇಂದ್ರ ಸರ್ಕಾರವು ತನ್ನ ಮುಂದೆ 10 ಕೋಟಿ ರೂಪಾಯಿ ಪರಿಹಾರದ ಠೇವಣಿ ಇರಿಸಿದರೆ ಮಾತ್ರವೇ ಇಟಲಿಯ ಇಬ್ಬರು ನಾವಿಕರ ವಿರುದ್ಧದ ಅಪರಾಧ ಪ್ರಕರಣವನ್ನು ಅಂತ್ಯಗೊಳಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ.
ಕೇರಳದ ಕರಾವಳಿ ತೀರದಲ್ಲಿ ಭಾರತದ ಇಬ್ಬರು ಮೀನುಗಾರರರನ್ನು 2012ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಇಟಲಿಯ ನೌಕಾಪಡೆಯ ಸಾಲ್ವಟೊರ್ ಗಿರೊನ್ ಮತ್ತು ಮಿಸ್ಸಿಮಿಲಿಯಾನೊ ಲಾಟೊರ್ರೆ ವಿರುದ್ಧದ ಪ್ರಕರಣ ಕೈಬಿಡುವ ಕುರಿತು ಬುಧವಾರ ವಿಚಾರಣೆ ನಡೆದಿದ್ದ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬದವರು ಪರಿಹಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಭಾರತ ಮತ್ತು ಇಟಲಿ ಸರ್ಕಾರಗಳ ನಡುವೆ ಕೆಲವು ತುರ್ತು ಇರುವುದರಿಂದ ಏ. 9ರಂದು ವಿಚಾರಣೆ ನಡೆಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದರು.
ಏಪ್ರಿಲ್ 19ರಂದು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಹಾಗೂ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಹಂಚಿಕೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು.
ಯಾವ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಭಾರತವು ಖಾತೆ ಸಂಖ್ಯೆಗಳನ್ನು ಒದಗಿಸಿದ ಬಳಿಕ ಪರಿಹಾರದ ಹಣವನ್ನು ವರ್ಗಾಯಿಸುವುದಾಗಿ ಇಟಲಿ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಶುಕ್ರವಾರ ವಿವರಗಳನ್ನು ಇಟಲಿ ಸರ್ಕಾರದೊಂದಿಗೆ ಹಂಚಿಕೊಳ್ಳಲಿದ್ದು, ಹಣ ಸ್ವೀಕೃತವಾದ ಮೂರು ದಿನಗಳ ಒಳಗೆ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಠೇವಣಿ ಇರಿಸುವುದಾಗಿ ತಿಳಿಸಿದೆ.

ಪ್ರಮುಖ ಸುದ್ದಿ :-   ರಾಜಸ್ಥಾನದ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಇವರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement