500 ಮಿಲಿಯನ್ ‘LinkedIn’ ಬಳಕೆದಾರರ ಮಾಹಿತಿ ಡಾರ್ಕ್ ವೆಬ್ ನಲ್ಲಿ ಮಾರಾಟ..?

ಫೇಸ್ ಬುಕ್ ನಂತರ ಮತ್ತೊಂದು ಸಾಮಾಜಿಕ ಜಾಲತಾಣದ ಪ್ರಮುಖ ಕಂಪನಿಯೊಂದರ ಡೇಟಾ ಸೋರಿಕೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ಬಾರಿ ಇದು ಲಿಂಕ್ಡ್ ಇನ್ ಗೆ ಸಂಬಂಧಿಸಿದೆ.
ಕಂಪನಿಯ ಸಕ್ರಿಯ ಬಳಕೆದಾರರ ಲ್ಲಿ ಮೂರನೇ ಎರಡರಷ್ಟು ಜನರಿಗೆ ಸಮಾನವಾದ ಸರಿ ಸುಮಾರು 500 ದಶಲಕ್ಷಕ್ಕೂ ಹೆಚ್ಚು ಲಿಂಕ್ಡ್ ಇನ್ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ ನ್ಯೂಸ್ ವರದಿ ಮಾಡಿದೆ. ಮೈಕ್ರೋಸಾಫ್ಟ್ ಮಾಲೀಕತ್ವದ ಕಂಪನಿಯಾಗಿದೆ.
ಸ್ಕ್ರ್ಯಾಪಿಂಗ್ ಎಂಬುದು ವೆಬ್ ಸೈಟ್ ಗಳು ಮತ್ತು ಸಾಮಾಜಿಕ ಮಾಧ್ಯಮ ಸೈಟ್ ಗಳಿಂದ ಮಾಹಿತಿಯನ್ನು ಎಳೆಯಲು ಬಾಟ್ ಗಳನ್ನು ಬಳಸುವ ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ. ಬಳಕೆದಾರರು ಅಥವಾ ಹೋಸ್ಟ್ ಕಂಪನಿಯು ಅನುಮತಿ ನೀಡಿದರೆ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ, ಇಲ್ಲದಿದ್ದರೆ ಬಳಕೆದಾರರ ಗೌಪ್ಯತೆ ಪ್ರೊಟೋಕಾಲ್ ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.
ಬಳಕೆದಾರರ ಡೇಟಾದಲ್ಲಿ ಲಿಂಕ್ಡ್ ಇನ್ ಐಡಿಗಳು, ಪೂರ್ಣ ಹೆಸರುಗಳು, ಇ ಮೇಲ್ ಐಡಿ, ಫೋನ್ ಸಂಖ್ಯೆಗಳು, ಲಿಂಗ, ಲಿಂಕ್ಡ್ ಇನ್ ಪ್ರೊಫೈಲ್ ಗಳಿಗೆ ಲಿಂಕ್ ಗಳು, ಬೇರೆ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳಿಗೆ ಲಿಂಕ್ ಗಳು, ವೃತ್ತಿಪರ ಶೀರ್ಷಿಕೆಗಳು ಮತ್ತು ಇತರ ಕೆಲಸ-ಸಂಬಂಧಿತ ಡೇಟಾ ಇದರಲ್ಲಿ ಸೇರಿವೆ ಎಂದು ಸೈಬರ್ ನ್ಯೂಸ್ ವರದಿ ತಿಳಿಸಿದೆ. ಆದರೆ ಕಂಪನಿ ಈ ಬಗ್ಗೆ ಏನನ್ನೂ ಹೇಳಿಲ್ಲ.
ಹ್ಯಾಕರ್ ನಾಲ್ಕು ಅಂಕಿಗಳ (ಡಾಲರ್) ಆರಂಭಿಕ ಬೆಲೆಯೊಂದಿಗೆ ಡೇಟಾವನ್ನು ಹರಾಜಿಗೆ ಇಟ್ಟಿದ್ದು ಕ್ರಿಪ್ಟೋಕರೆನ್ಸಿಯಲ್ಲಿ ವಹಿವಾಟು ನಡೆಸಲಾಗುತ್ತಿದೆಯಂತೆ. ಇತ್ತೀಚೆಗೆ, ಹ್ಯಾಕರ್ ಗಳು ಬಳಕೆದಾರರ ಲಿಂಕ್ಡ್ ಇನ್ ಪ್ರೊಫೈಲ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಗೋಲ್ಡನ್ ಚಿಕನ್‌ ಎನ್ನುವ ಹ್ಯಾಕಿಂಗ್ ತಂಡವು ಸ್ಪಿಯರ್ ಫಿಶಿಂಗ್ ತಂತ್ರವನ್ನು ಬಳಸಿಕೊಂಡು ನಿರೀಕ್ಷಿತ ಉದ್ಯೋಗಾಕಾಂಕ್ಷಿಗಳನ್ನುವೇತನದ ಕೊಡುಗೆಯೊಂದಿಗೆ ಆಕರ್ಷಿಸುತ್ತಿದೆ ಎಂದೂ ಸೈಬರ್‌ ನ್ಯೂಸ್‌ ವರದಿ ತಿಳಿಸಿದೆ.ಈ ಬಗ್ಗೆ ಕಂಪನಿ ಏನನ್ನೂ ಹೇಳಿಲ್ಲ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement