ಪಶ್ಚಿಮ ಬಂಗಾಳ: ಮತದಾನದ ಹಿಂಸಾಚಾರದ ಸಮಯದಲ್ಲಿ ತನ್ನ ಮಗು ಹೊತ್ತೊಯ್ದರು ಎಂದು ತಾಯಿ

ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಸಿಟಾಲ್ಕುಚಿ ವಿಧಾನಸಭಾ ಕ್ಷತ್ರದ ಜೋರ್ಪಟ್ಕಿ ಪ್ರದೇಶದಲ್ಲಿ ಮತದಾನ ಕೇಂದ್ರಕ್ಕೆ ಬಂದಿದ್ದ ಮಹಿಳೆಯೊಬ್ಬಳು ತನ್ನ ಮಗುವನ್ನು ಹಿಂಸಾಚಾರಕ್ಕಿಳಿದ ಗುಂಪೊಂದು ಎತ್ತಿಕೊಂಡು ಹೋಗಿದೆ ಎಂದು ಹೇಳಿಕೊಂಡಿದ್ದಾಳೆ ಟಿವಿ 9 ಬಾಂಗ್ಲಾ ವರದಿ ಮಾಡಿದೆ. ಆದರೆ ಇದನ್ನು ಟಿಎಂಸಿ ಪಕ್ಷವು ನಾಟಕ ಎಂದು ಹೇಳಿದೆ.

ವರದಿ ಪ್ರಕಾರ, ಮತ ಚಲಾವಣೆಗೆ ಮತದಾನ ಕೇಂದ್ರಕ್ಕೆ ಬಂದಿದ್ದಾಗ, ಹಿಂಸಾತ್ಮಕ ಗುಂಪು ಮತದಾನ ಕೇಂದ್ರದಲ್ಲಿ ಬಾಂಬ್ ಸ್ಫೋಟ ಮತ್ತು ಗುಂಡಿನ ಚಕಮಕಿಗೆ ಕಾರಣವಾಯಿತು. “ನಾನು ಗುಂಡಿಯನ್ನು ಒತ್ತುವ ಸಂದರ್ಭದಲ್ಲಿ, ಜಗಳವಾಯಿತು. ಎಲ್ಲೆಡೆ ರಕ್ತಪಾತವಾಗಿತ್ತು. ನನ್ನ ಮಗುವಿನೊಂದಿಗೆ ಮತದಾನ ಕೇಂದ್ರದಿಂದ ಹೊರಬರಲು ನನಗೆ ಸಾಧ್ಯವಾಗಲಿಲ್ಲ. ”ಆಗ ದುಷ್ಕರ್ಮಿಗಳು ಅವಳನ್ನು ಕೂದಲು ಹಿಡಿದು  ಎಳೆದು ಮಗುವನ್ನು ಹೇಗೆ ಕಸಿದುಕೊಂಡರು ಎಂದು ಅವಳು ಹೇಳಿಕೊಂಡಿದ್ದಾಳೆ.
ನಾನು ಈಗ ನನ್ನ ಮಗುವನ್ನು ಎಲ್ಲಿ ಹುಡುಕಲಿ ಎಂದು ಅವಳು ಕಣ್ಣೀರು ಹಾಕಿದ್ದಾಳೆ. “ನನಗೆ ಯಾವುದೇ ಸರ್ಕಾರ ಬೇಡ. ಇಲ್ಲಿ, ಹಲವಾರು ಮುಸ್ಲಿಂ ಮಹಿಳೆಯರು ದಾವೊ (ಮ್ಯಾಚೆಟ್) ನೊಂದಿಗೆ ಬಂದಿದ್ದರು. ನನ್ನ ಮಗುವನ್ನು ನಾನು ಅವರಿಗೆ ಹಸ್ತಾಂತರಿಸದಿದ್ದರೆ ಕೊಲ್ಲುತ್ತೇನೆ ಎಂದು ಅವರು ಬೆದರಿಕೆ ಹಾಕಿದರು. ತನ್ನ ಸಂಬಂಧಿಕರೊಬ್ಬರು ಸಹ ಕಾಣೆಯಾಗಿದ್ದಾರೆ. ತನ್ನ ಮಗು ಮತ್ತು ತನ್ನ ಸಂಬಂಧಿಯನ್ನು ಹುಡುಕಿಕೊಡಿ ಎಂದು  ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ.
ಟಿಎಂಸಿಯು ಮಹಿಳೆ ಹೇಳಿದ್ದು ‘ಸುಳ್ಳು’ ಎಂದು ಆರೋಪಿಸಿದೆ ಮತ್ತು ಘಟನೆಯನ್ನು ನಾಟಕ ಎಂದು ಕರೆದಿದೆ. ಮಗು ಮಹಿಳೆಯ ವಶದಲ್ಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಏತನ್ಮಧ್ಯೆ, ಪೊಲೀಸ್ ಅಧಿಕಾರಿಗಳು ಮಹಿಳೆಯನ್ನು ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದರ ವಾಸ್ತವದ ಬಗ್ಗೆ ಆಡಳಿತ ಕೂಲಂಕಷವಾಗಿ ಪರಿಶೀಲಿಸಬೇಕಿದೆ.
ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಚುನಾವಣೆಯ ಮತದಾನ ಶನಿವಾರ ಉತ್ತರ ಜಿಲ್ಲೆಗಳಾದ ಕೂಚ್ ಬೆಹಾರ್ ಮತ್ತು ಜಲ್ಪೈಗುರಿಯಲ್ಲಿ ನಡೆಯಿತು. ದಕ್ಷಿಣ ಪ್ರದೇಶದಲ್ಲಿ, ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮತದಾನ ನಡೆಸಲಾಯಿತು.
ಮತದಾನದ ವೇಳೆ ಸಿಟಾಲ್ಕುಚಿಯಲ್ಲಿ ಗುಂಪೊಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮೇಲೆ ದಾಳಿ ನಡೆಸಿತ್ತು. ವರದಿಗಳ ಪ್ರಕಾರ, ಕೂಚ್ ಬೆಹಾರ್ ಜಿಲ್ಲೆಯ ಸಿಟಾಲ್ಕುಚಿ ಶಾಸಕಾಂಗ ಸಭೆಯ ಮಾಥಭಂಗ ಬ್ಲಾಕ್‌ನ ಜೋರ್ಪಟ್ಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ನಂತರ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರಿಂದ ಐವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕೂಚ್ ಬೆಹರ್ ಎಸ್ಪಿ ಸಿಐಎಸ್ಎಫ್ ಕ್ರಮವನ್ನು ಸಮರ್ಥಿಸಿಕೊಂಡರು, ಈ ಕ್ರಮವು “ಆತ್ಮರಕ್ಷಣೆಯದ್ದಾಗಿದೆ ಎಂದು ಹೇಳಿದರು. 300-350 ಪುರುಷರ ಗುಂಪೊಂದು ಸಿಐಎಸ್ಎಫ್ ತಂಡದ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ಗನ್ನುಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದು, ಅದು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲು ತಂಡವನ್ನು ಒತ್ತಾಯಿಸುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ, ಗುಂಪೋಂದು ದಾಳಿ ಮಾಡಿದಾಗ ಆತ್ಮರಕ್ಷಣೆ”ಗಾಗಿ ಮತದಾನ ಕೇಂದ್ರದಲ್ಲಿ ಕೇಂದ್ರ ಪಡೆಗಳು ಗುಂಡು ಹಾರಿಸಿದಾಗ ಐವರು ಮೃತಪಟ್ಟರು. ಮತ್ತೊಂದು ಸ್ಥಳದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಮತದಾನಕ್ಕೆ ಬಂದಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮುಂಜಾನೆಯಿಂದಲೇ ಸಿತಾಲ್ಕುಚಿ ಕುದಿಯುತ್ತಿದ್ದು, ವರದಿಗಳ ಪ್ರಕಾರ, ಬೂತ್‌ನ ಹೊರಗೆ ಬಾಂಬ್‌ಗಳನ್ನು ಎಸೆಯಲಾಯಿತು. ಪೊಲೀಸರು ಈ ಪ್ರದೇಶದಿಂದ ಬಾಂಬ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement