ಕೊರೊನಾ ಸೋಂಕು ಮಹಾರಾಷ್ಟ್ರದಲ್ಲಿ ಹೆಚ್ಚಳ ಯಾಕೆ ? ಚುನಾವಣಾ ರಾಜ್ಯಗಳಲ್ಲಿ ಹೆಚ್ಚಳವಿಲ್ಲ ಏಕೆ?: ಅಧ್ಯಯನಕ್ಕೆ ಮಹಾರಾಷ್ಟ್ರ ಸರ್ಕಾರ ಸೂಚನೆ

ಮಹಾರಾಷ್ಟ್ರವು ಪ್ರತಿದಿನ ಅತಿ ಹೆಚ್ಚು ಹೊಸ ಕೊವಿಡ್‌ -19 ಪ್ರಕರಣಗಳನ್ನು ವರದಿ ಮಾಡುತ್ತಲೇ ಇದ್ದರೂ, ಇತರ ರಾಜ್ಯಗಳು ಇಂತಹ ಪರಿಸ್ಥಿತಿಗೆ ಏಕೆ ಸಾಕ್ಷಿಯಾಗಿಲ್ಲ ಎಂದು ತಿಳಿಯಲು ರಾಜ್ಯ ಸರ್ಕಾರ ಬಯಸಿದೆ. ವಿಶೇಷವಾಗಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಏಕೆ ಹೆಚ್ಚಳವಾಗಿಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಏಕೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಸರ್ಕಾರ ಕೇಳಿದೆ ಎಂದು ಜವಳಿ, ಬಂದರು, ಮೀನುಗಾರಿಕೆ ಸಚಿವ ಅಸ್ಲಾಮ್ ಶೇಖ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾತ್ರ ಪ್ರಕರಣಗಳು ಏಕೆ ಹೆಚ್ಚಾಗುತ್ತಿವೆ ಎಂದು ಅಧ್ಯಯನ ಮಾಡಲು ರಾಜ್ಯ ಸರ್ಕಾರವು ಕೊವಿಡ್‌-19 ಕಾರ್ಯಪಡೆಗೆ ಕೇಳಿದೆ, ಆದರೆ ಹೆಚ್ಚಿನ ಸಂಖ್ಯೆಯ ಜನರೊಂದಿಗೆ ಚುನಾವಣಾ ಸಮಾವೇಶ ನಡೆಯುತ್ತಿರುವ ರಾಜ್ಯಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಯಾಕೆ ಹೆಚ್ಚಳವಾಗಿಲ್ಲ ಎಂದು ಅಧ್ಯಯನ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ರಾಜ್ಯಗಳಲ್ಲಿ ಅನೇಕ ಮಂತ್ರಿಗಳು ಸಾಮೂಹಿಕ ಸಭೆ ನಡೆಸುತ್ತಿದ್ದಾರೆ ಆದರೆ ಅಲ್ಲಿ ಕೊವಿಡ್‌ ಪ್ರಕರಣಗಳಲ್ಲಿ ಯಾವುದೇ ಉಲ್ಬಣ ಇಲ್ಲ” ಎಂದು ಸಚಿವ ಶೇಖ್ ಹೇಳಿದರು.
ಪ್ರಸ್ತುತ ದೇಶದಲ್ಲಿ ಕೊವಿಡ್‌-19 ನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಅರ್ಧದಷ್ಟು ಮಹಾರಾಷ್ಟ್ರದಲ್ಲಿ ಇದೆ. ರಾಜ್ಯವು ಪ್ರತಿದಿನ ಸುಮಾರು 50,000ಕ್ಕೂ ಹೆಚ್ಚು ಹೊಸ ಪ್ರಕರಣಗಳಿಗೆ ಕಾರಣವಾಗಿದ್ದು, ಇದು ದೊಡ್ಡ ಕಳವಳಕ್ಕೆ ಕಾರಣವಾಗಿದೆ. ಮಾರ್ಚ್ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆಯಿದ್ದವು, ಆದರೆ ಈಗ ಅದು ಐದು ಲಕ್ಷ ದಾಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಹಾರಾಷ್ಟ್ರ ಸಚಿವರು ಗಮನಿಸಿದಂತೆ, ಚುನಾವಣೆಯ ಸಮಯದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಗಳು ಮತ್ತು ರೋಡ್ ಶೋಗಳನ್ನು ಕಂಡ ರಾಜ್ಯಗಳಲ್ಲಿ ಉಲ್ಬಣವು ಇಷ್ಟೊಂದು ಹೆಚ್ಚಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹಲವಾರು ದೊಡ್ಡ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಆದರೆ ಈ ರಾಜ್ಯಗಳು ಇಂತಹ ದೊಡ್ಡ ಪ್ರಮಾಣದ ಸೋಂಕುಗಳಿಗೆ ಸಾಕ್ಷಿಯಾಗಿಲ್ಲ. ಅಸ್ಸಾಂನಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಸುಮಾರು 1500ದಷ್ಟಿದ್ದರೆ, ಪಶ್ಚಿಮ ಬಂಗಾಳದಲ್ಲಿ ಸುಮಾರು 21,000 ಪ್ರಕರಣಗಳಿವೆ. ಚುನಾವಣಾ ವ್ಯಾಪ್ತಿಯ ರಾಜ್ಯಗಳಲ್ಲಿ ಕೇರಳದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು 40,000ದಷ್ಟಿದ್ದರೆ, ತಮಿಳುನಾಡಿನಲ್ಲಿ 38,000ದಷ್ಟಿದೆ.ಈ ಬಗ್ಗೆ ಅಧ್ಯಯನ ನಡೆಸಲು ತಿಳಿಸಲಾಗಿದೆ ಎಂದು ಮಹಾರಾಷ್ಟ್ರ ಸಚಿವರು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ