ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಷ, ಉದ್ಯಮಿ ಕುಟುಂಬ ಪಾರು

ಕೊಚ್ಚಿ: ಅನಿವಾಸಿ ಭಾರತೀಯ ಉದ್ಯಮಿ ಸಂಚರಿಸುತ್ತಿದ್ದ ಹೆಲಿಕಾಫ್ಟರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹೆಲಿಕಾಫ್ಟರ್‌ ತುರ್ತು ಭೂಸ್ಪರ್ಷ ಮಾಡಿದ್ದು, ಏಳು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಚ್ಚಿಯಲ್ಲಿ ವರದಿಯಾಗಿದೆ.
ಎನ್‍ ಆರ್ ಐ ಉದ್ಯಮಿ ಎಂ.ಎ.ಯೂಸಫ್ ಆಲಿ, ಅವರ ಪತ್ನಿ, ಮೂವರು ಸಿಬ್ಬಂದಿ ಹಾಗೂ ಇಬ್ಬರು ಕ್ರೂ ಮೆಂಬರುಗಳು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲುಲು ಗ್ರೂಪ್‌ಗೆ ಸೇರಿರುವ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ ದೋಷ ಕಾಣಿಸಿಕೊಂಡಿತು.ತಕ್ಷಣವೇ ಅದನ್ನು ಖಾಲಿ ಜಾಗದಲ್ಲಿ ಇಳಿಸುವಲ್ಲಿ ಪೈಲಟ್‌ ಯಶಸ್ವಿಯಾಗಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ