ಏಕಲವ್ಯ ಪ್ರಶಸ್ತಿ ಪುರಸ್ಕೃತ ಈಜುಪಟು ಆತ್ಮಹತ್ಯೆ

posted in: ರಾಜ್ಯ | 0

ಬೆಂಗಳೂರು: ವರ್ಷದಿಂದ ಕೆಲಸವಿಲ್ಲದೆ ಖಿನ್ನತೆಗೆ ಒಳಗಾಗಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜಯನಗರದ ಮಾರೇನಹಳ್ಳಿಯಲ್ಲಿ ನಡೆದಿದೆ. ಈಜುಗಾರ್ತಿಯಾಗಿದ್ದ ಜಿ.ಬಿ. ಶಿಲ್ಪಾ (41) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರೂ ಕೆಲಸ ಪಡೆಯಲಾಗದ ಬಗ್ಗೆ ಡೆತ್ ನೋಟ್‌ನಲ್ಲಿ ನೋವು ತೋಡಿಕೊಂಡಿರುವ ಶಿಲ್ಪಾ, ಪತಿ ಮನೆಯಲ್ಲಿಲ್ಲದ ವೇಳೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರೀಡಾ ಶಾಲೆಯೊಂದರಲ್ಲಿ ಕೆಲ ವರ್ಷಗಳಿಂದ ಕೋಚ್ ಅಗಿ ಕೆಲಸ ಮಾಡುತ್ತಿದ್ದ ಅವರು, ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಘಟನೆ ಕುರಿತು ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ