ಬಸ್‌ ನಿಲ್ದಾಣದಲ್ಲೇ ವಿಷ ಸೇವಿಸಿದ ಸಾರಿಗೆ ನೌಕರ

ಹಾಸನ: ಸಾರಿಗೆ ನೌಕರರ ಮುಷ್ಕರ ೬ನೇ ದಿನಕ್ಕೆ ಮುಂದುವರೆದಿದ್ದು, ಸಾರಿಗೆ ನೌಕರರೊಬ್ಬರು ಬಸ್‌ ನಿಲ್ದಾಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ-ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ (೪೦) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ತೀವ್ರ ಅಸ್ವಸ್ಥಗೊಂಡಿದ್ದು, ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನನ್ನನ್ನು ವರ್ಗಾವಣೆ ಮಾಡಿ ಎಫ್‌ಐಆರ್‌ ಹಾಕಿದ್ದಾರೆ. ಅನಂತಸುಬ್ಬರಾವ ಅವರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಪಾಲಾಕ್ಷ ಆರೋಪಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕವಾಗಿಲ್ಲ : ಸಿಎಂ ಕಚೇರಿ ಸ್ಪಷ್ಟನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement