ಭಾರತದಲ್ಲಿ ಈವರೆಗೆ 948 ರೂಪಾಂತರಿ ವೈರಸ್‌ ಸೋಂಕು ಪತ್ತೆ

ನವ ದೆಹಲಿ: ಭಾರತದಲ್ಲಿ ಇದುವರೆಗೆ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳ ಕೋವಿಡ್ -19 ವೈರಸ್ಸಿನ ರೂಪಾಂತರಿ ಒಟ್ಟು 948 ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಹೇಳಿದೆ.
ಮೂರು ಕೋವಿಡ್ -19 ರೂಪಾಂತರಗಳು ಹೆಚ್ಚು ಸಾಂಕ್ರಾಮಿಕಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಈ ಮೂರು ರೂಪಾಂತರಿತ ವೈರಸ್ ರೂಪಾಂತರಗಳು ಈ ಹಿಂದೆ SARS-CoV-2 ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ ಮತ್ತೆ ಸೋಂಕಿಗೆ ತುತ್ತಾಗುವಂತೆ ಸಾಮರ್ಥ್ಯ ಹೊಂದಿವೆ.
ಬ್ರಿಟನ್‌ನಿಂದ ಬಂದ ಕೋವಿಡ್ -19 ರ ರೂಪಾಂತರಿತ ವೈರಸ್‌ ಕಳೆದ ವರ್ಷ ಡಿಸೆಂಬರ್ 29 ರಂದು ಬ್ರಿಟನ್‌ನಿಂದ ಹಿಂದಿರುಗಿದ ಆರು ಪ್ರಯಾಣಿಕರಲ್ಲಿ ಮೊದಲು ವರದಿಯಾಗಿತ್ತು.
ಸೋಮವಾರ ದೇಶವು 1,68,912 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದ್ದು, ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 1,35,27,717 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 904 ಕೋವಿಡ್‌ ಸಂಬಂಧಿತ ಸಾವುಗಳು ವರದಿಯಾಗಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ