ಮಹಾಂತಪ್ಪ ನಂದೂರ, ದೀಪಾ‌ ಹಿರೇಗುತ್ತಿ, ಪದ್ಮರಾಜ‌ ದಂಡಾವತಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದ 2018 , 2019 ಮತ್ತು 2020 ರ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
2018 ನೇ ಸಾಲಿಗಾಗಿ ಕೊಪ್ಪದ ಉಪನ್ಯಾಸಕಿ ದೀಪಾ ಹಿರೇಗುತ್ತಿಯವರ ಅಂಕಣ ಬರಹಗಳ ಸಂಕಲನ ಫೀನಿಕ್ಸ್; 2019 ನೇ ಸಾಲಿಗಾಗಿ ಹುಬ್ಬಳ್ಳಿಯ‌ ಮಹಾಂತಪ್ಪ‌ ನಂದೂರ; ಮತ್ತು 2020 ನೇ‌ ಸಾಲಿಗಾಗಿ ಪದ್ಮರಾಜ ದಂಡಾವತಿ ಅವರ ಅನುವಾದಿತ ಕೃತಿ ಸೀತಾ ರಾಮಾಯಣದ ಸಚಿತ್ರ ಮರುಕಥನ ಪುಸ್ತಕಗಳಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ‌ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಚಂದ್ರಕಲಾ ದೇಶಪಾಂಡೆ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 3000 ರೂ. ನಗದು, ಪ್ರಶಸ್ತಿ ಪತ್ರ, ‌ಪ್ರಶಸ್ತಿ ಫಲಕ, ಕಾರ್ಯಕ್ರಮದಲ್ಲಿ‌ ಸನ್ಮಾನ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆಯ ಪ್ರೊ: ರಾಜಶೇಖರ ಅಲ್ಲೂರಕರ್ ಕುಕ್ಕುಂದಾ; ಧಾರವಾಡದ ಹಿರಿಯ ಸಾಹಿತಿಗಳಾದ ಎ.ಎ.ದರಗಾ ಮತ್ತು ಲಕ್ಷ್ಮೀಕಾಂತ ಇಟ್ನಾಳ ತೀರ್ಪುಗಾರರಾಗಿದ್ದರು. ಶ್ರವಣಬೆಳಗೊಳದಲ್ಲಿ ಮೇ 23ರಂದು ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಶಸ್ತಿಗಾಗಿ ಪುಸ್ತಕ ಕಳುಹಿಸಿದ ಲೇಖಕ, ಲೇಖಕಿಯರಿಗೆ, ತೀರ್ಪುಗಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement