ರಸ್ತೆ ಬದಿ ನಿಂತಿದ್ದ ಬೈಕ್‌ಗಳಿಗೆ ಕಾಂಗ್ರೆಸ್‌ ಮುಖಂಡನ ಕಾರು ಡಿಕ್ಕಿ: ಇಬ್ಬರ ಸಾವು

posted in: ರಾಜ್ಯ | 0

ಧಾರವಾಡ: ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಸಹೋದರ ವಿಜಯ್​ ಕುಲಕರ್ಣಿ ಅವರಿದ್ದ ಕಾರು ಬೈಕ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ಸೋಮವಾರ ನಡೆದ ವರದಿಯಾಗಿದೆ.
ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಬರುತ್ತಿದ್ದ ಕಾರು ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಎದುರು ನಿಂತಿದ್ದ ಬೈಕ್​ಗಳಿಗೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮೂರು ಬೈಕ್​ಗಳಿಗೆ ವಿಜಯ್​ ಕುಲಕರ್ಣಿ ಅವರಿದ್ದ ಕಾರು ಡಿಕ್ಕಿಹೊಡೆದಿದೆ. ಡಿಕ್ಕೆ ಹೊಡೆದ ವೇಗಕ್ಕೆ  ಚರಣ್ ಮೌನೇಶ್ವರ ನಾಯಕ (16) ಹಾಗೂ  ಶೇಖರ ಬಸಪ್ಪ ಹುದ್ದಾರ (37) ಎಂಬುವವರು ಮೃತಪಟ್ಟಿದ್ದಾರೆ. ಅರವಿಂದ ಮಲ್ಲನಗೌಡ ಪಾಟೀಲ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಸಂಸ್ಕೃತದಲ್ಲಿ ಗಲ್ಲಿ ಕ್ರಿಕೆಟ್‌ನ ಕಾಮೆಂಟರಿ: ನಿರೂಪಕನ ಭಾಷಾ ನಿರರ್ಗಳತೆಗೆ ಬೆರಗಾದ ಇಂಟರ್ನೆಟ್: ವಿಡಿಯೋ ವೈರಲ್ ...ವೀಕ್ಷಿಸಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement