ಭಾರತವನ್ನು ಹಿಂದೂ ರಾಷ್ಟ್ರ’ ಘೋಷಿಸಬೇಕು ಎಂದ ಕೇರಳದ ಕ್ರೈಸ್ತ ಶಾಸಕ..! ; ಈಗ ಚರ್ಚೆಗೆ ಗ್ರಾಸ

ಭಾರತವನ್ನು ‘ಹಿಂದೂ ರಾಷ್ಟ್ರ  ಎಂದು ಘೋಷಿಸಬೇಕು. ಯಾಕೆಂದು ಅದು ಎಲ್ಲರಿಗೂ ಸುರಕ್ಷತೆ ನೀಡುತ್ತದೆ ಎಂದು  ಕೇರಳ ಪಕ್ಷೇತರ  ಶಾಸಕ ಪಿ.ಸಿ. ಜಾರ್ಜ್ ಹೇಳಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಕೇರಳದ ಇಡುಕ್ಕಿಯ ತೊಡುಪುಳದಲ್ಲಿ ಎಚ್‌ಆರ್‌ಡಿಎಸ್ ಇಂಡಿಯಾ ಎಂಬ ಬುಡಕಟ್ಟು ಕಲ್ಯಾಣ ಎನ್‌ಜಿಒ ಸೋಮವಾರ ಸೋಮವಾರ (ಏಪ್ರಿಲ್ 12) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಶಾಸಕ ಪಿ.ಸಿ. ಜಾರ್ಜ್ ಅವರು ಇಸ್ಲಾಮಿಸ್ಟ್‌ಗಳು ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಯೋಜಿಸುತ್ತಿದ್ದಾರೆಂದು ಹೇಳಿದ್ದಾರೆ.
ಅಲ್ಲದೆ, 2016 ರಲ್ಲಿ ಜಾರಿಗೆ ಬಂದ ನೋಟು ಅಮಾನ್ಯೀಕರಣದಿಂದಾಗಿ ಈ ಕೆಟ್ಟ ಯೋಜನೆ ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಮಿಸ್ಟ್‌ಗಳು ಕ್ರೈಸ್ತ ಬಹುಸಂಖ್ಯಾತ ದೇಶಗಳನ್ನು ಅತಿಕ್ರಮಣ ಮಾಡುತ್ತಿದ್ದಾರೆ ಮತ್ತು ಅವರನ್ನು ಇಸ್ಲಾಮಿಕ್ ಆಗಿ ಪರಿವರ್ತಿಸುತ್ತಿದ್ದಾರೆ ಎಂದು ಹೇಳಿದರು.
2030 ರ ವೇಳೆಗೆ ಇಸ್ಲಾಮಿಸ್ಟ್‌ಗಳಿಂದ ರಕ್ಷಿಸಿಕೊಳ್ಳಲು ಭಾರತ ತನ್ನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿಕೊಳ್ಳಬೇಕು ಎಂದು ಪೂಂಜಾರ್ ಕ್ಷೇತ್ರದ ಶಾಸಕ ಜಾರ್ಜ್‌ ಹೇಳಿದ್ದಾರೆ.
ಫ್ರಾನ್ಸ್‌ ದೇಶದ ಉದಾಹರಣೆ ನೀಡಿದ ಅವರು, , ಅಮೆರಿಕದಂತಹ ದೇಶಗಳು ಸಹ ಈ ಸಾಲಿನಲ್ಲಿ ಬೀಳುತ್ತಿವೆ, ಇಸ್ಲಾಮಿಸ್ಟ್‌ಗಳು ಫ್ರಾನ್ಸ್‌ಗೆ ನುಸುಳಿದರು, ಅದು ಕ್ರೈಸ್ತ ಸಮುದಾಯದ ರಾಷ್ಟ್ರವಾಗಿದ್ದರೂ, ಮುಸ್ಲಿಮರು ಅತಿಕ್ರಮಣ ಮಾಡುತ್ತಿದ್ದಾರೆ, ನಾವು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಈ ರಾಷ್ಟ್ರವನ್ನು (ಹೋಗಲು) ಬಿಡಬಹುದೇ? ಇದನ್ನು ಚರ್ಚಿಸಬೇಕಾಗಿದೆ. ಈ ಬಗ್ಗೆ ಯಾರಾದರೂ ಮಾತನಾಡಬೇಕು ಎಂದು ಹೇಳದ್ದಾರೆ.
ಕೇರಳ ಜನ ಪಕ್ಷಂ (ಜಾತ್ಯತೀತ) ಸಂಸ್ಥಾಪಕ ಮತ್ತು ಏಳು ಬಾರಿ ಶಾಸಕರಾದ ಪಿ.ಸಿ. ಜಾರ್ಜ್, “ಜಗತ್ತಿನಾದ್ಯಂತದ ರಾಷ್ಟ್ರಗಳನ್ನು ಪರಿಗಣಿಸೋಣ. ಬಂಡವಾಳಶಾಹಿ ದೇಶಗಳು, ಬಡ ರಾಷ್ಟ್ರಗಳು ಮತ್ತು ಭಾರತದಂತಹ ಮೂರನೇ ವಿಶ್ವ ರಾಷ್ಟ್ರಗಳಿವೆ. ಎಲ್ಲಾ ದೇಶಗಳು ಕೆಲವು ಧರ್ಮಕ್ಕೆ ಪ್ರಾಮುಖ್ಯತೆ ನೀಡುತ್ತವೆ. ಅರೇಬಿಯನ್ ದೇಶಗಳ ವಿಷಯದಲ್ಲಿ, ಅವರು ಕೇವಲ ಇಸ್ಲಾಮಿಕ್‌ ಅಲ್ಲ, ಆದರೆ ಇಸ್ಲಾಮಿಕ್ ಅಲ್ಲದ ಯಾವುದೂ ಸೂಕ್ತವಲ್ಲ ಎಂದು ನಂಬುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪಿ.ಸಿ. ಜಾರ್ಜ್ ಲವ್ ಜಿಹಾದ್ ಕುರಿತು ಮಾತನಾಡಿದ ಅವರು,
ಲವ್ ಜಿಹಾದ್ ವಾಸ್ತವವಾಗಿ ಇದೆ ಎಂದು ನನಗೆ ತಿಳಿದಿದೆ, ‘ಲವ್ ಜಿಹಾದ್ ಇದೆ’ ಎಂದು ಹೇಳುತ್ತೇನೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಾನು ಹೇಳುವುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಇದನ್ನೆಲ್ಲ ಕೊನೆಗೊಳಿಸಲು ಒಂದೇ ಒಂದು ಪರಿಹಾರವಿದೆ. ಗೌರವಾನ್ವಿತ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಅಭಿಪ್ರಾಯಪಟ್ಟರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಓದಿರಿ :-   ಹಸುಗಳಲ್ಲಿ ಕಾಣಿಸಿಕೊಂಡ ಲಂಪಿ ವೈರಸ್‌ಗೆ ನೈಜೀರಿಯಾ ಚಿರತೆಗಳನ್ನು ಭಾರತಕ್ಕೆ ತಂದಿದ್ದು ಕಾರಣವಂತೆ...! ಹೇಳಿಕೆ ಮೂಲಕ ಅಪಹಾಸ್ಯಕ್ಕೀಡಾದ ಕಾಂಗ್ರೆಸ್‌ ನಾಯಕ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.4 / 5. ಒಟ್ಟು ವೋಟುಗಳು 8

ನಿಮ್ಮ ಕಾಮೆಂಟ್ ಬರೆಯಿರಿ

advertisement