೧೧ ಇಸ್ಲಾಮಿಕ್‌ ಸಂಘಟನೆಗಳಿಗೆ ಶ್ರೀಲಂಕಾ ಬ್ಯಾನ್‌

ಕೊಲಂಬೊ: ಉಗ್ರರ ಚಟುವಟಿಕೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಆರೋಪದ ಮೇಲೆ ದ್ವೀಪರಾಷ್ಟ್ರ ಶ್ರೀಲಂಕಾ ಸರಕಾರ ಇಸ್ಲಾಮಿಕ್‌ ಸ್ಟೇಟ್‌, ಅಲ್‌ಖೈದಾ ಸೇರಿದಂತೆ ೧೧ ಇಸ್ಲಾಮಿಕ್‌ ಸಂಘಟನೆಗಳನ್ನು ನಿಷೇಧಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಗೆಜೆಟ್‌ ಅಧಿಸೂಚನೆ ಹೊರಡಿಸಿ, ಭಯೋತ್ಪಾದನೆ ತಡೆ ನಿಬಂಧನೆ ಕಾಯ್ದೆಯಡಿ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರಿಗೆ ೧೦ರಿಂದ ೨೦ ವರ್ಷ ಕಾರಾಗೃಹ ಶಿಕ್ಷೆ ನೀಡುವುದಾಗಿ ತಿಳಿಸಲಾಗಿದೆ.
ನಿಷೇಧಿತ ಸಂಸ್ಥೆಗಳಲ್ಲಿ ಶ್ರೀಲಂಕಾ ಇಸ್ಲಾಮಿಕ್‌ ಮೂವ್‌ಮೆಂಟ್‌ ಕೂಡ ಸೇರಿದೆ. ೨೦೧೯ರಲ್ಲಿ ಈಸ್ಟರ್‌ ಸಂದರ್ಭದಲ್ಲಿ ಚರ್ಚ್‌ನಲ್ಲಿ ನಡೆದ ಬಾಂಬ್‌ ದಾಳಿಯ ನಂತರ ನ್ಯಾಷನಲ್‌ ತೌಹೀತ್‌ ಜಮಾತ್‌ ಸೇರಿದಂತೆ ಎರಡು ಸಂಘಟನೆಗಳ ಮೇಲೆ ನಿಷೇಧ ಹೇರಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ