ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯೆಂದು ನಕಲಿ ಇಂಜೆಕ್ಷನ್‌: ಎಚ್‌ಡಿಕೆ ಆರೋಪ

posted in: ರಾಜ್ಯ | 0

ಬಸವಕಲ್ಯಾಣ: ರಾಜ್ಯದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ನಕಲಿ ಇಂಜೆಕ್ಷನ್‌ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೊವಿಡ್-೧೯ ಭಯಾನಕತೆ ತೋರಿಸಿ ಹಣ ಸೆಳೆಯುವ ದಂಧೆ ಆರಂಭವಾಗಿದೆ. ಕೆಲವೆಡೆ ಒಂದು ಇಂಜೆಕ್ಷನ್‌ಗೆ ೧೦,೦೦೦ರೂ. ಶುಲ್ಕ ಪಡೆಯಲಾಗುತ್ತಿದೆ. ಕೆಲವೆಡೆ ಮಾತ್ರೆಗಳ ಕೊರತೆಯೂ ಆಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ವ ಪಕ್ಷ ಸಭೆ ಕರೆಯುವ ಮುನ್ನ ತಜ್ಞರ ಸಲಹೆ ಪಡೆಯುವುದು ಒಳಿತು ಎಂದರು.
ಕೊರೊನಾ ನಿಯಮಾವಳಿ ಜಾರಿಗೊಳಿಸಿದ ಬಿಜೆಪಿಯವರೇ ದೊಡ್ಡ ದೊಡ್ಡ ಸಭೆಗಳನ್ನು ಆಯೋಜಿಸಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ