ಸಗಟು ಮಾರಾಟ ದರ ಹಣದುಬ್ಬರ ಶೇ. 7.39, ಎಂಟು ವರ್ಷಗಳಲ್ಲೇ ಗರಿಷ್ಠ ಏರಿಕೆ..!

ನವ ದೆಹಲಿ: ಕೋವಿಡ್‌ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಕಳೆದ ಮಾರ್ಚಿನಲ್ಲಿ ದೇಶದ ಸಗಟು ಮಾರಾಟ ದರ ಹಣದುಬ್ಬರ ಶೇ. 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.
ವರದಿಗಳ ಪ್ರಕಾರ, ಮಾರ್ಚಿನಲ್ಲಿ ಸಗಟು ಮಾರಾಟ ದರ ಹಣದುಬ್ಬರ 8 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದಕ್ಕೂ ಮೊದಲು 2012ರ ಅಕ್ಟೋಬರ್‌ನಲ್ಲಿ ಈ ರೀತಿ ಹೆಚ್ಚಿನ ಹಣದುಬ್ಬರ ದಾಖಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಹಣದುಬ್ಬರ ಶೇ 4.17 ರಷ್ಟಿತ್ತು.
ಕಳೆದ ವರ್ಷದ ಮಾರ್ಚ್ ಗೆ ಹೋಲಿಸಿದರೆ ಈ ವರ್ಷದ ಮಾರ್ಚ್ ನಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮೂಲ ಲೋಹದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ, ಸಗಟು ದರ ಹಣದುಬ್ಬರ, ಪ್ರಾಥಮಿಕ ವಸ್ತುಗಳಲ್ಲಿ ಶೇ 6.40, ಇಂಧನ ಮತ್ತು ವಿದ್ಯುತ್ ನಲ್ಲಿ ಶೇ 10.25 , ತಯಾರಿಸಿದ ಉತ್ಪನ್ನಗಳಲ್ಲಿ ಶೇ 7.34 ಮತ್ತು ಆಹಾರ ಸೂಚ್ಯಂಕದಲ್ಲಿ ಶೇ 5.28 ರಷ್ಟಿತ್ತು. ಕಳೆದ ಫೆಬ್ರವರಿಗೆ ಹೋಲಿಸಿದರೆ, ಇಂಧನ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಏರಿಕೆ ಕಂಡುಬಂದಿದೆ., ಇದು ಶೇ 9..75 ಕ್ಕಿಂತ ಅಧಿಕವಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ