ಕೊರೊನಾ ಔಷಧಿ ರೆಮ್‌ಡಿಸಿವಿರ್‌ ಬೆಲೆ ಇಳಿಕೆ

ನವದೆಹಲಿ: ಕೊರೊನಾ ಪೀಡಿತರ ಚಿಕಿತ್ಸೆಗೆ ಬಳಕೆ ಮಾಡುವ “ರೆಮ್‌ಡಿಸಿವಿರ್‌ʼ ಔಷಧಿಯ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.
ಅವರು ಟ್ವೀಟ್‌ನಲ್ಲಿ, ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದಾಗಿ ರೆಮ್‌ಡಿಸಿವಿರ್‌ ಬೆಲೆಯನ್ನು ಎಪ್ರಿಲ್‌ ೧೫ರಿಂದ ಅನ್ವಯವಾಗುವಂತೆ ಉತ್ಪಾದಕರು ೫೪೦೦ರೂ.ಗಳಿಂದ ೩೫೦೦ಗಳಿಗೆ ಇಳಿಕೆ ಮಾಡಿದ್ದಾರೆ. ಇದರಿಂದ ಕೊವಿಡ್‌ ವಿರುದ್ಧದ ಪ್ರಧಾನಿ ಹೋರಾಟಕ್ಕೆ ಬೆಂಬಲ ಸಿಗಲಿದೆ ಎಂದು ತಿಳಿಸಿದ್ದಾರೆ.
ಎಪ್ರಿಲ್‌ ೧೧ರಿಂದ ರೆಮ್‌ಡಿಸಿವಿರ್‌ ಔಷಧಿ ರಫ್ತು ನಿಷೇಧ ಜಾರಿಯಲ್ಲಿದ್ದು, ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲಾಗಿದೆ. ೪ ಲಕ್ಷ ಬಾಟಲ್‌ಗಳ ರಫ್ತನ್ನು ಸ್ಥಗಿತಗೊಳಿಸಲಾಗಿದೆ. ಔಷಧ ಇಲಾಖೆ ಹಾಗೂ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ರೆಮ್‌ಡಿಸಿವಿರ್‌ ಉತ್ಪಾದನೆ ಮೇಲೆ ನಿಗಾ ವಹಿಸಿದೆ. ಕಳೆದ ವಾರದಿಂದ ಅನ್ವಯವಾಗುವಂತೆ ತಿಂಗಳ ಉತ್ಪಾದನೆಯನ್ನು ೨೮ ಲಕ್ಷ ಬಾಟಲ್‌ಗಳಿಂದ ೪೧ ಲಕ್ಷ ಬಾಟಲ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement