ಕೊರೊನಾ ರೋಗಿಗೆ ಕುರ್ಚಿಯಲ್ಲೇ ಕೂಡ್ರಿಸಿ ಆಮ್ಲಜನಕ ಸಿಲಿಂಡರ್ ನೀಡಿದ ಆಸ್ಪತ್ರೆ..!!

ಛತ್ತೀಸ್​ಗಡ ಛತ್ತೀಸ್​ಗಡದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸುವ ಆಸ್ಪತ್ರೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ.
ಅಷ್ಟೊಂದು ದೊಡ್ಡ ರಾಜ್ಯವಲ್ಲದ ಛತ್ತೀಸ್‌ಗಡದಲ್ಲಿ ಕೊರೊನಾ ಸೋಂಕಿನ ಹಾವಳಿಗೆ ಅರೋಗ್ಯ ವ್ಯವಸ್ಥೆಯೇ ತತ್ತರಿಸಿದೆ.
ಮಹಾಸಮುಂಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ ಕೋವಿಡ್ ಪೀಡಿತ ಯುವಕನೊಬ್ಬ ಮೂರು ಗಂಟೆಗಳ ಕಾಲ ಆಮ್ಲಜನಕ ಸಿಲಿಂಡರ್‌ನೊಂದಿಗೆ ಕುರ್ಚಿಯ ಮೇಲೆಯೇ ಕುಳಿತಿರುವ ಘಟನೆ ವರದಿಯಾಗಿದೆ.
ಇತ್ತೀಚೆಗೆ ಸಂಸದೀಯ ಕಾರ್ಯದರ್ಶಿ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಅವ್ಯವಸ್ಥೆ ಗಮನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಾಸಮುಂಡ್‌ನ ಯುವಕನೊಬ್ಬನಲ್ಲಿ ಕೊರೊನಾ ದೃಢಪಟ್ಟಿತ್ತು, ಉಸಿರಾಟದ ತೊಂದರೆಯಿಂದಾಗಿ ಆತ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದ. ಹಾಸಿಗೆಗಳು ಖಾಲಿಯಾಗಿಲ್ಲದ ಕಾರಣ, ಆಸ್ಪತ್ರೆಯಲ್ಲಿ ಆತನಿಗೆ ಆಮ್ಲಜನಕದ ಸಿಲಿಂಡರ್ ನೀಡಿ ಆವರಣದಲ್ಲಿರುವ ಕುರ್ಚಿಯ ಮೇಲೆ ಕೂಡ್ರಿಸಲಾಗಿತ್ತು.
ಘಟನೆಯ ಕುರಿತು ಭಾರೀ ಆಕ್ರೋಶ ವ್ಯಕ್ತವಾದ ನಂತರ, ಆಸ್ಪತ್ರೆಯು ಯುವಕನಿಗೆ ಹಾಸಿಗೆಯ ವ್ಯವಸ್ಥೆ ಮಾಡಿ, ಚಿಕಿತ್ಸೆ ಮುಂದುವರಿಸಿದೆ ಎಂದು ವರದಿಯಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ