ಕೊರೊನಾ ಹೆಚ್ಚಳ: ಪುಣೆ ಟಾಟಾ ಮೋಟರ್ಸ್‌ನಲ್ಲಿ ಉತ್ಪಾದನೆ ಸ್ಥಗಿತಕ್ಕೆ ನಿರ್ಧಾರ..!

ಪುಣೆ: ಕೊರೊನಾ ೨ನೇ ಅಲೆ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆಯಲ್ಲಿರುವ ಟಾಟಾ ಮೋಟರ್ಸ್‌ ಘಟಕ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಘಟಕದಲ್ಲಿ ಪ್ರಸ್ತುತ ಸೀಮಿತ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪುಣೆ ಘಟಕದಲ್ಲಿ ಹ್ಯಾರಿಯರ್‌, ಸಫಾರಿ ಕಾರುಗಳ ಉತ್ಪಾದನೆಯಾಗುತ್ತಿದೆ. ಅಲ್ಲದೇ ಇದೇ ಘಟಕದಲ್ಲಿ ಟಾಟಾ ಬಸ್‌ ಹಾಗೂ ಟ್ರಕ್‌ಗಳನ್ನು ಕೂಡ ಉತ್ಪಾದಿಸಲಾಗುತ್ತಿದೆ. ಮಹಾರಾಷ್ಟ್ರ ಸರಕಾರ ಕೊರೊನಾ ಕುರಿತು ಹೊಸ ನಿಯಮಗಳ ಘೋಷಣೆ ಮಾಡಿದ ನಂತರ ಟಾಟಾ ಮೋಟರ್ಸ್‌ ಈ ನಿರ್ಧಾರ ಕೈಗೊಂಡಿದೆ.
ಈ ಕ್ರಮದಿಂದಾಗಿ ಹ್ಯಾರಿಯರ್‌ ಹಾಗೂ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಸಫಾರಿ ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಲಿದೆ. ಸಫಾರಿಗೆ ಈಗಾಗಲೇ ಅತೀವ ಬೇಡಿಕೆಯಿದ್ದು, ಕೆಲವು ನಗರಗಳಲ್ಲಿ ನೂತನ ಸಫಾರಿಗಾಗಿ ಎರಡೂವರೆ ತಿಂಗಳು ಕಾಯಬೇಕಾಗಿದೆ.
ಪುಣೆಯ ಘಟಕ ಎಪ್ರಿಲ್‌ ೩೦ರವರೆಗೆ ಸ್ಥಗಿತಗೊಳ್ಳಲಿದೆ. ಮಹಾರಾಷ್ಟ್ರದ ಅಟೊಮೊಬೈಲ್‌ ಹಬ್‌ ಎನಿಸಿಕೊಂಡಿದ್ದು, ಇಲ್ಲಿ ಬಜಾಜ್‌, ಜೀಪ್‌, ಮಹಿಂದ್ರ, ಸ್ಕೊಡಾ, ಮರ್ಸಿಡಿಸ್‌ ಬೆಂಜ್‌, ಜಾಗ್ವಾರ್‌, ಲ್ಯಾಂಡ್‌ ರೋವರ್‌, ಪಿಯಾಜಿಯೊ, ಫೋರ್ಸ್‌ ಮೋಟರ್ಸ್‌ ಘಟಕಗಳಿವೆ. ಅಲ್ಲದೇ ಜಿಲ್ಲೆಯಲ್ಲಿ ಕೆಲ ಭಾರಿ ಯಂತ್ರೋಪಕರಣಗಳ ವಾಹನಗಳು ಕೂಡ ಉತ್ಪಾದನೆಯಾಗುತ್ತವೆ. ಪುಣೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಹೆಚ್ಚಾಗಿದೆ. ಪುಣೆ ಜಿಲ್ಲೆಯಲ್ಲಿ ೧,೧೨,೨೧೩ ಸಕ್ರಿಯ ಸೋಂಕಿತರಿದ್ದಾರೆ. ಎಪ್ರಿಲ್‌ ೧೪ರಂದು ೭೮೮೭ ಹೊಸ ಪ್ರಕರಣಗಳು ಪತ್ತೆಯಾಗಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಜಮ್ಮು-ಕಾಶ್ಮೀರ ಕಾರಾಗೃಹಗಳ ಡಿಜಿಪಿ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ: ಹತ್ಯೆ ಹೊಣೆ ಹೊತ್ತುಕೊಂಡ ಭಯೋತ್ಪಾದಕ ಸಂಘಟನೆ ಪಿಎಎಫ್‌ಇ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement