ಕೊರೊನಾ ಔಷಧ, ಸಲಕರಣೆ ಜಿಎಸ್‌ಟಿಯಿಂದ ಹೊರಗಿಡಿ: ಸೋನಿಯಾ ಒತ್ತಾಯ

ನವದೆಹಲಿ: ಕೊರೊನಾ ಚಿಕಿತ್ಸೆಗಾಗಿ ಅಗತ್ಯವಿರುವ ಎಲ್ಲಾ ಉಪಕರಣಗಳು, ಔಷಧಿಗಳು ಮತ್ತು ಇತರೆ ಸಾಧನಗಳನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಬಿಕ್ಕಟ್ಟು ನಿರ್ವಹಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಕೊರತೆಯ ಬಗ್ಗೆ ಮನವಿ ಮಾಡಿದರೂ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಕೊರೊನಾ ಲಸಿಕೆ ನೀಡುವ ವಯಸ್ಸಿನ ಮಾನದಂಡದಲ್ಲಿ ಬದಲಾವಣೆ ಮಾಡಿ ೨೫ ವರ್ಷದವರಿಗೂ ಲಸಿಕೆ ಕೊಡಿಸಬೇಕು. ಲಾಕ್‌ಡೌನ್‌, ಪ್ರಯಾಣ ನಿರ್ಬಂಧ ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗೆ ಮಾಸಿಕ ೬೦೦೦ ರೂ. ನೆರವು ಒದಗಿಸಬೇಕು. ತಮ್ಮ ತವರು ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರ ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement