ರೈಲ್ವೆ ಪ್ಲಾಟ್ ಫಾರ್ಮ್, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸದಿದ್ದರೆ 500 ರೂ.ವರೆಗೆ ದಂಡ

ನವ ದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿ ವರೆಗೆ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ. ಇದನ್ನು ಮುಂದಿನ ಆದೇಶದವರೆಗೆ 6 ತಿಂಗಳವರೆಗೆ ಜಾರಿಗೆ ತರಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಈ ಮಧ್ಯೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕೋವಿಡ್-19 ಮಾರ್ಗಸೂಚಿ ಹೊರಡಿಸಿತ್ತು. ರೈಲ್ವೆಯಲ್ಲಿ ಪ್ರಯಾಣಿಸುವವರು, ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಒಯ್ಯಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ಪಾಲಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಬೇಯಿಸಿದ ಆಹಾರದ ಬದಲಿಗೆ ಸಿದ್ಧಪಡಿಸಿದ ಪ್ಯಾಕೇಜ್ ಮಾಡಿದ ಆಹಾರ ನೀಡಲು ಮಾರ್ಗಸೂಚಿ ಹೊರಡಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಟೇಕ್ ಎವೆ ಕಿಟ್ ವಸ್ತುಗಳು ಮಾರಾಟಕ್ಕೆ ಸಿಗುವಂತೆ ಮಾಡಲಾಗಿದೆ,
ರೈಲ್ವೆ ಇಲಾಖೆ ಈಗ ದೇಶದಲ್ಲಿ ಸರಾಸರಿ 1402 ವಿಶೇಷ ರೈಲುಗಳ ಸಂಚಾರ ಮಾಡುತ್ತಿದೆ. ಒಟ್ಟು 5 381 ಉಪ ನಗರ ರೈಲು ಸೇವೆಗಳು ಮತ್ತು 830 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ. ಇದಲ್ಲದೆ, ಹೆಚ್ಚಿನ ಪ್ರೋತ್ಸಾಹದೊಂದಿಗೆ ಹೆಚ್ಚು ವಿಶೇಷ ರೈಲುಗಳ ತದ್ರೂಪುಗಳಾಗಿ 28 ವಿಶೇಷ ರೈಲುಗಳನ್ನು ನಡೆಸಲಾಗುತ್ತಿದೆ ಎಂದು ರೈಲ್ವೆ ಹೇಳಿದೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement