ನಮ್ಮಲ್ಲಿ ಸಾಧ್ಯವೇ..?: ಕೋವಿಡ್‌ ನಿಯಮ ಮುರಿದ ನಾರ್ವೆ ಪ್ರಧಾನಿಗೆ ಬಿತ್ತು ಅಪಾರ ದಂಡ..!

ಕೆಲವು ದೇಶಗಳಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಅವರು ತಮ್ಮ ದೇಶದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ನಾರ್ವೆದೇಶದಲ್ಲಿ ಈ ವಿದ್ಯಮಾನ ನಡೆದಿದೆ. ಅಲ್ಲಿನ ಪ್ರಧಾನಿಗೆ ಪೊಲೀಸರು ದಂಡ ವಿಧಿಸಿರುವುದೇ ಅಲ್ಲಿನ ಜನ ಕಾನೂನುಗಳನ್ನು ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ಉತ್ತಮ ನಿದರ್ಶನ..!
ನಮ್ಮ ದೇಶಕ್ಕೆ ಹೋಲಿಸಿದರೆ ಇದು ದೊಡ್ಡ ವಿಷಯವೇ ಅಲ್ಲ ಎಂದು ನೀವೇ ಹೇಳುತ್ತೀರಿ. ಕೋವಿಡ್‌ ನಿಯಮಾವಳಿಗಳ ಪ್ರಕಾರ ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ನಾರ್ವೆ ಪ್ರಧಾನ ಮಂತ್ರಿ ಎರ್ನಾ ಸೋಲ್ಬರ್ಗ್ ಅವರಿಗೆ ಪೊಲೀಸರು 20 ಸಾವಿರ ಕ್ರೌನ್ (ಅಂದಾಜು 1.75 ಲಕ್ಷ ರೂ) ದಂಡವಾಗಿ ವಿಧಿಸಿದ್ದಾರೆ. ಇದು ಕೆಲ ದಿನಗಳ ಹಿಂದೆ ನಡೆದಿದೆ.
60 ವರ್ಷದ ಎರ್ನಾ ಸೋಲ್​ಬರ್ಗ್ ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ಇವರು ಫೆಬ್ರವರಿ ತಿಂಗಳಲ್ಲಿ ರೆಸಾರ್ಟ್​ವೊಂದರಲ್ಲಿ ತಮ್ಮ 60ನೇ ಜನ್ಮದಿನ ಆಚರಿಸಿಕೊಂಡ ಸಂದರ್ಭದಲ್ಲಿ ಅವರ ಕುಟುಂಬದ 13 ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಇದು ನಾರ್ವೆ ದೇಶದಲ್ಲಿ ಜಾರಿಗೆ ತಂದಿರುವ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲಿ ಜಾರಿಯಾದ ನಿಯಮದ ಪ್ರಕಾರ ಕಾರ್ಯಕ್ರಮದಲ್ಲಿ 10ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ. ಪ್ರಧಾನಿ ಕುಟುಂಬದ ಕಾರ್ಯಕ್ರಮದಲ್ಲಿ 13 ಜನ ಪಾಲ್ಗೊಂಡಿದ್ದು, ಅವರೇ ಜಾರಿಗೆ ತಂದಿರುವ ನಿಯಮಾವಳಿ ಉಲ್ಲಂಘನೆ ಆಗಿದೆ ಎಂದು ಪೊಲೀಸರು ತಮ್ಮ ದೇಶದ ಪ್ರಧಾನಿ ಎರ್ನಾ ಸೊಲ್ಬರ್ಗ್ ಅವರಿಗೆ ನಿದಂಡ ಹಾಕಿದ್ದಾರೆ.
ಪ್ರಧಾನಿಗೆ ದಂಡ ವಿಧಿಸಿದ್ದನ್ನು ಅಲ್ಲಿನ ಪೊಲೀಸ್ ಮುಖ್ಯಸ್ಥರು ಸಮರ್ಥಿಸಿಕೊಂಡಿದ್ದಾರೆ. ನಿರ್ಬಂಧ ಹೇರಿರುವ ಸರ್ಕಾರದ ಮುಖ್ಯಸ್ಥರೇ ಉಲ್ಲಂಘನೆ ಮಾಡುವುದು ಸರಿ ಅಲ್ಲ. ಹೀಗಾಗಿ, ಅವರಿಗೆ ದಂಡ ಹಾಕುವುದು ಸರಿಯಾದ ಕ್ರಮವಾಗಿದೆ ಎಂದು ಪೊಲೀಸ್ ಮುಖ್ಯಸ್ಥರು
ಯೂರೋಪಿಲ್ಲಿರುವ ನಾರ್ವೆ ದೇಶದಲ್ಲಿ ಕೋವಿಡ್ ಬಿಗಿ ನಿಯಮಗಳು, ನಿರ್ಬಂಧಗಳು ಚಾಲನೆಯಲ್ಲಿವೆ. ಆಸ್ಪತ್ರೆಗಳಿಗೆ ಜನರು ದಾಖಲಾಗುವುದು ಕಡಿಮೆ ಆದಲ್ಲಿ ಮಾತ್ರ ಜೂನ್ ಅಂತ್ಯದ ವೇಳೆ ನಿರ್ಬಂಧಗಳನ್ನ ಸಡಿಲಿಸಲಾಗವುದು ಎಂದು ಆಡಳಿತ ತಿಳಿಸಿದೆ.
50 ಲಕ್ಷದಷ್ಟು ಜನಸಂಖ್ಯೆ ಇರುವ ನಾರ್ವೆಯಲ್ಲಿ ಈಗ 13 ಸಾವಿರ ಸಕ್ರಿಯ ಪ್ರಕರಣಗಳಿವೆ. ನಾರ್ವೆ ಪ್ರಧಾನಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಹಾಕಿದ್ದನ್ನು ಅವರು ಸ್ವೀಕರಿಸಿದ್ದಾರೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement